Site icon PowerTV

ಓವರ್​ಟೇಕ್​ ಮಾಡುವ ಬರದಲ್ಲಿ ಅಪಘಾತ : ಕಸದ ಲಾರಿ ಹರಿದು ಇಬ್ಬರು ಮಹಿಳೆಯರ ಸಾ*ವು !

ಬೆಂಗಳೂರು : ಓವರ್​ಟೇಕ್​ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ​ ಸವಾರರ ಮೇಲೆ ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದಿದೆ.

ಇಂದು ಮಧ್ಯಹ್ನ 12:20ರ ಸುಮಾರಿಗೆ ನಾಜಿಯಾ ಸುಲ್ತಾನ್ ಹಾಗೂ ನಾಜಿಯಾ ಇರ್ಫಾನ್ ಎಂಬ ಮಹಿಳೆಯರು ಥಣಿಸಂದ್ರ ಮುಖ್ಯ ರಸ್ತೆಯ ಸರಾಯಿಪಾಳ್ಯದ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಬಿಬಿಎಂಪಿಯ ಕಸದ ಲಾರಿಯನ್ನು ಎಡಗಡೆಯಿಂದ ಓವರ್​ಟೇಕ ಮಾಡಲು ಹೋಗಿದ್ದಾರೆ. ಆದರೆ ಈ ವೇಳೆ ಮತ್ತೊಂದು ಬೈಕ್ ಅಡ್ಡಬಂದಿದ್ದು. ಆ ಅಪಘಾತವನ್ನು ತಪ್ಪಿಸಿಕೊಳ್ಳುವ ಭರದಲ್ಲಿ ಬಲಕ್ಕೆ ತಿರುವು ಪಡೆದಿದ್ದಾರೆ.

ಇದನ್ನೂ ಓದಿ :ತಂದೆಯ ಕೊಲೆ ಮಾಡಿ , ಹೃದಯಾಘಾತದ ನಾಟಕವಾಡಿದ ಖತರ್ನಾಕ್​ ಮಗ !

ಈ ವೇಳೆ ಲಾರಿ ಡಿಕ್ಕಿಯಾಗಿದ್ದು. ಇಬ್ಬರು ಮಹಿಳೆಯರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಇಬ್ಬರು ಮಹಿಳೆಯರ ಮೃತದೇಹಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು. ಹೆಣ್ಣೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Exit mobile version