Site icon PowerTV

ಮಗಳ ಮೇಲೆ ಕಣ್ಣು ಹಾಕಿದ ಪತಿಯನ್ನು ತುಂಡು ತುಂಡು ಮಾಡಿದ ಪತ್ನಿ : ನಂತರ ನಡೆಯಿತು ರೋಚಕ ಕಹಾನಿ

ಚಿಕ್ಕೋಡಿ : ಹೆಂಡತಿ ಸರಸಕ್ಕೆ ಬರದಿದ್ದಕ್ಕೆ ಪತಿಯೊಬ್ಬ ಮಗಳ ಮೇಲೆಯೆ ಕಣ್ಣಾಕಿದ್ದು. ಇದರಿಂದ ಕುಪಿತಗೊಂಡ ಪತ್ನಿ ಗಂಡನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾಳೆ. ಕೊಲೆ ಮಾಡಿದ ನಂತರ ಪತಿಯ ಶವವನ್ನು ಸಾಗಿಸಲು ಪತ್ನಿ ಮಾಡಿದ ಪ್ಲಾನ್​ ಎದೆ ನಡುಗಿಸುವಂತಿದ್ದು. ಘಟನೆಯ ಸಂಪೂರ್ಣ ವರದಿ ಈ ಕೆಳಗಿನಂತಿದೆ.

ಬೆಳಗಾವಿ ಜಿಲ್ಲೆಯೆ ಚಿಕ್ಕೋಡಿ ತಾಲ್ಲೂಕಿನ ಉಮರಾಣಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಗಳ ಮೇಲೆ ಕಣ್ಣೂ ಹಾಕಿದ್ದ ಪತಿ ಶ್ರೀಮಂತ ಇಟ್ನಾಳೆಯನ್ನು ಪತ್ನಿ ಸಾವಿತ್ರಿ ಇಟ್ನಾಳೆ ಕೊಲೆ ಮಾಡಿದ್ದು. ಮಕ್ಕಳು ಮಲಗಿದ ಮೇಲೆ ಪತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾಳೆ. ನಂತರ ಕೊಲೆ ಪ್ರಕರಣ ಹೊರಗೆ ಬಂದರೆ ಎಲ್ಲಿ ಮಕ್ಕಳು ಅನಾಥರಾಗುತ್ತಾರೊ ಎಂದು ಹೆದರಿದ ಪತ್ನಿ ಸಿನಿಮೀಯ ರೀತಿಯಲ್ಲಿ ಪ್ಲಾನ್​ ರೂಪಿಸಿದ್ದರು.

ಇದನ್ನೂ ಓದಿ :ಜ್ವರಬಂದ ಮಗುವಿಗೆ ಸೌತೆಕಾಯಿ ತಿನ್ನಿಸಿದ ವಿಚಾರ: ಚಾಕುವಿನಿಂದ ಇರಿದು ತಂಗಿಯ ಕೊಲೆ ಮಾಡಿದ ಅಣ್ಣ

ಏನಿದು ಖತರ್ನಾಕ್​ ಪ್ಲಾನ್​ !

ಪತಿಯ ಶವ ದೊರೆತರೆ ಎಲ್ಲಿ ಪೊಲೀಸರು ಬಂಧಿಸುತ್ತಾರೋ ಎಂದು ಎದರಿದ್ದ ಪತ್ನಿ ಶವವನ್ನು ಹೊರಗೆ ಸಾಗಿಸುವ ಪ್ಲಾನ್​ ಮಾಡಿದ್ದಳು. ಆದರೆ ಒಬ್ಬಳೆ ಶವವನ್ನು ಹೊರಗೆ ಸಾಗಿಸಲು ಅಸಾಧ್ಯ ಎಂದು ತಿಳಿದ ಸಾವಿತ್ರಿ ಪತಿಯ ಶವವನ್ನು ಎರಡು ಭಾಗಗಳಾಗಿ ತುಂಡರಿಸಿ, ಚಿಕ್ಕ ಬ್ಯಾರಲ್​ನಲ್ಲಿ ಹಾಕಿ ಸಾಗಾಟ ಮಾಡಿದ್ದಳು. ಬ್ಯಾರಲ್​ನ್ನು ಉರುಳಿಸುತ್ತಾ ಪಕ್ಕದ ಗದ್ದೆಗೆ ಪತಿಯ ಶವವನ್ನು ಸಾಗಿಸಿದ್ದ ಸಾವಿತ್ರಿ ದೇಹದ ಎರಡು ಭಾಗಗಳನ್ನು ಜೋಡಿಸಿದ್ದಳು.

ನಂತರ ಮನೆಗೆ ಬಂದ ಸಾವಿತ್ರಿ ಶವ ಸಾಗಿಸಿದ ಬ್ಯಾರಲ್​ನ್ನು ತೊಳೆದು ಬಾವಿಗೆ ಎಸೆದಿದ್ದಾಳೆ. ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ, ರಕ್ತಸಿಕ್ತವಾದ ಹಾಸಿಗೆ, ಬಟ್ಟೆಗಳನ್ನು ಒಂದು ಚೀಲದಲ್ಲಿ ಪ್ಯಾಕ್ ಮಾಡಿ ಅವುಗಳನ್ನು ಬಾವಿಗ ಎಸೆದಿದ್ದಳು. ರಕ್ತವಾಗಿದ್ದ ಜಾಗವನ್ನೆಲ್ಲ ತೊಳೆದಿದ್ದ ಪತ್ನಿ. ನಂತರ ತಾನೂ ಸಾಹ್ನ ಮಾಡಿ ತನ್ನ ಬಟ್ಟೆಯನ್ನು ಸುಟ್ಟಿ ಹಾಕಿದ್ದಳು. ನಂತರ ಗಂಡನ ಮೊಬೈಲ್​ನ್ನು ಸ್ವಿಚ್ಚ್​ಆಪ್​ ಮಾಡಿದ್ದಳು. ಈ ವೇಳೆ ಎಚ್ಚರಗೊಂಡ ಮಗಳಿಗೂ ಕೃತ್ಯದ ಬಗ್ಗೆ ಬಾಯಿ ಬಿಡದಂತೆ ಸೂಚಿಸಿದ್ದಳು.

ಆದರೆ ಪತಿಯ ಶವ ಜಮೀನಿನಲ್ಲಿ ಸಿಕ್ಕಿದ ಹಿನ್ನಲೆಯಲ್ಲಿ ಪೊಲೀಸರು ಕೊಲೆ ಕೇಸ್​ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಈ ವೇಳೆ ಅನುಮಾನಗೊಂಡು ಪತ್ನಿಯನ್ನು ವಿಚಾರಿಸಿದಾಗ ಪತ್ನಿ ಸಾವಿತ್ರಿ ತಾನು ಮಾಡಿದ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾಳೆ.

ಇದನ್ನೂ ಓದಿ : ಶಾರ್ಕ್​ ಸರ್ಕ್ಯೂಟ್​ಗೆ ಹೊತ್ತಿ ಉರಿಯಿತು ನಗರದ ಪ್ರತಿಷ್ಟಿತ ಬೈಕ್​ ಶೋರೂಂ !

ತನ್ನ ಪತಿಯನ್ನು ತುಂಡರಿಸಲು ಕಾರಣವೇನು !

ಚಿಕ್ಕೋಡಿ ಪೊಲೀಸರು ಘಟನೆ ಬಗ್ಗೆ ಸಾವಿತ್ರಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಎಲ್ಲವನ್ನು ಒಪ್ಪಿಕೊಂಡಿರುವ ಸಾವಿತ್ರಿ ಗಂಡನ ಹಿಂಸೆಯನ್ನು ಅನುಭವಿಸಲು ಸಾಧ್ಯವಾಗದೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಗಂಡ ಕುಡಿಯಲು ಹಣ ನೀಡು ಎಂದು ಪೀಡಿಸುತ್ತಿದ್ದ, ಜೊತೆಗೆ ಬೇರೆಯವರ ಜೊತೆಗೆ ಮಲಗಿ ಹಣ ತಂದು ಕೊಡು ಎಂದು ಕಿರುಕುಳ ನೀಡುತ್ತಿದ್ದ. ಇದರಿಂದಾಗ ತಾನೂ ಪರಪುರಷನ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದೆ ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾಳೆ.

ಇಷ್ಟೆ ಅಲ್ಲದೆ ಮಗಳ ಮೇಲೂ ಕಣ್ಣು ಹಾಕಿದ್ದ ಪತಿ, ಆಕೆಯ ಮೇಲೆ ಎರಗಲು ಯತ್ನಿಸಿದ್ದನು. ಇವನೆಲ್ಲ ನೋಡಿ ಸಹಿಸಿಕೊಳ್ಳಲಾಗದೆ ಪತಿಯ ಕೊಲೆ ಮಾಡಿದೆ ಎಂದು ವಿಚಾರಣೆ ವೇಳೆ ಸಾವಿತ್ರಿ ಬಾಯಿ ಬಿಟ್ಟಿದ್ದಾಳೆ ಹಾಗೂ ಮಕ್ಕಳು ಅನಾಥರಾಗುತ್ತಾರೆ, ನನ್ನನ್ನು ಬಿಟ್ಟು ಬಿಡಿ ಎಂದು ಕಣ್ಣೀರು ಹಾಕಿದ್ಧಾಳೆ. ಆದರೆ ಪೊಲೀಸರು ಸಾವಿತ್ರುಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ಮಾಹಿತಿ ದೊರೆತಿದೆ.

Exit mobile version