ಬೆಂಗಳೂರು: ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಚಿತ್ರ ಕಿಚ್ಚ ಸುದೀಪ ಅಭಿನಯದ ಮ್ಯಾಕ್ಸ್ ದಿ ಮೂವಿ ಚಿತ್ರವು ಡಿಸೆಂಬರ್ 25ರಂದು ವಿಶ್ವದಾದ್ಯಂತ ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಸದ್ಯ ಈ ಚಿತ್ರವು ನೂರು ಕೋಟಿ ಕ್ಲಬ್ ಸೇರುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದೆ.
#MaxTheMovie Joins 100 Cr Elite Club ? pic.twitter.com/oeS3zV3cOE
— Let’s X OTT GLOBAL (@LetsXOtt) January 2, 2025
ಸದ್ಯ ಚಿತ್ರದ ಬಿಡುಗಡೆಗೊಂಡು 8 ದಿನವಾಗಿದ್ದು ವಿಶ್ವದಾದ್ಯಂತ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಇಂಡಿಯನ್ ಬಾಕ್ಸ್ಆಫೀಸ್ ಎಕ್ಸ್ ಖಾತೆ ಬರೆದು ಕಿಚ್ಚ ಸುದೀಪ ಅವರನ್ನು ಟ್ಯಾಕ್ ಮಾಡಿದ್ದಾರೆ. ಆದರೆ, ಚಿತ್ರದ ನಿರ್ಮಾಪಕ, ವಿತರಕರು ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಕೊಟ್ಟಿಲ್ಲ. ಹೀಗಾಗಿ ಈ ವಿಚಾರಕ್ಕೆ ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಕಾದುನೋಡಬೇಕಿದೆ.
#MaxTheMovie Joins the ₹100 Cr Club! ??@KicchaSudeep delivers yet another milestone as #MaxTheMovie crosses ₹100 Cr gross worldwide. #KicchaSudeep? #KicchaBOSS? pic.twitter.com/dM8TRXIova
— Indian Box Office (@TradeBOC) January 2, 2025
