ಹಾಸನ : ಕೌಟುಂಬಿಕ ಕಲಹ ಹಿನ್ನಲೆ ಇಂಜಿನಿಯರ್ ಓರ್ವ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಮೃತನನ್ನು 35 ವರ್ಷದ ಪ್ರಮೋದ್ ಎಂದು ಗುರುತಿಸಲಾಗಿದೆ.
ಹಾಸನ ತಾಲ್ಲೂಕಿನ, ಇಂದಿರಾನಗರದಲ್ಲಿ ವಾಸವಾಗಿದ್ದ ಪ್ರಮೋದ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದನು. ಆದರೆ ಕಳೆದ ಡಿಸೆಂಬರ್ 29ರಂದು ಸಂಜೆ ಮನೆಯಲ್ಲಿ ಪೋನ್ ಬಿಟ್ಟು ಪ್ರಮೋದ್ ಹೊರಗೆ ತೆರಳಿದ್ದನು. ಪ್ರಮೋದ್ಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು ಆದರೆ ಪ್ರಮೋದ್ ಸಿಗದಿದ್ದ ಕಾರಣ ಹಾಸನದ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ : 308 ಕೋಟಿ ಮೌಲ್ಯದ ಮಧ್ಯ ಮಾರಾಟ : 513 ಡ್ರಿಂಕ್ ಆ್ಯಂಡ್ ಡ್ರೈವ್ ಕೇಸ್ ದಾಖಲು !
ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿಕೊಂಡಿದ್ದ ಪೊಲೀಸರು ಪ್ರಮೋದ್ಗಾಗಿ ಹುಡುಕಾಟ ಆರಂಭಿಸಿದ್ದರು. ಹಾಸನದ, ಗೊರೂರು ಶೆಟ್ಟಿಹಳ್ಳಿ ಬಳಿಯ ಹೇಮಾವತಿ ನದಿಯ ಬಳಿಯಲ್ಲಿ ಪ್ರಮೋದ್ನ ಟಿವಿಎಸ್ ಜುಪಿಟರ್ ವಾಹನ ಪತ್ತೆಯಾಗಿತ್ತು. ಈ ಗಾಡಿಯನ್ನು ಪರಿಶೀಲಿಸಿದ್ದ ಸ್ಥಳೀಯರಿಗೆ ಗಾಡಿಯ ಡಿಕ್ಕಿಯಲ್ಲಿ ಪ್ರಮೋದ್ನ ಪಾಸ್ಬುಕ್ ಪತ್ತೆಯಾಗಿತ್ತು. ಪಾಸ್ಬುಕ್ ಪರಿಶೀಲನೆ ನಡೆಸಿದ ಸ್ಥಳೀಯರು ಪೋಷಕರು ಸ್ಥಳೀಯರಿಗೆ ಪೋನ್ ಮಾಡಿ ತಿಳಿಸಿದ್ದರು.
ಇದರ ಬೆನ್ನಲ್ಲೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಡಿಸೆಂಬರ್ 30ರಂದು ಹೇಮಾವತಿ ನದಿಯಲ್ಲಿ ಪ್ರಮೋದ್ಗಾಗಿ ಹುಡುಕಾಟ ನಡೆಸಿದ್ದರು. ಆದರೆ ಇಂದು ನದಿಯಲ್ಲಿ ಪ್ರಮೋದ್ ಶವ ತೇಳುತ್ತಿರುವುದನ್ನು ಕಂಡ ಪೊಲೀಸರು. ಶವವನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ. ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.


