2025ರಲ್ಲಿ ತೆರೆಕಾಣಲಿರುವ ಬಹುನಿರೀಕ್ಷಿತ ಕನ್ನಡ ಸಿನಿಮಾಗಳು ಯಾವುವು ಗೊತ್ತೇ ?

2024ಕ್ಕೆ ಈಗಾಗಲೆ ಗುಡ್​ಬಾಯ್ ಹೇಳಿ, 2025ನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗಿದೆ. ಇದರ ನಡುವೆ ಅನೇಕ 2025ರಲ್ಲಿ ಕೈಗೊಳ್ಳಬೇಕಾದ ಅನೇಕ ಕಾರ್ಯಗಳ ಪಟ್ಟಿಯನ್ನು ಹಲವರು ತಯಾರಿಸುತ್ತಿದ್ದಾರೆ. ಇದರ ನಡುವೆ ಕನ್ನಡ ಚಿತ್ರರಂಗವು ಕೂಡ ಈ ಬಾರಿ ರಾಷ್ಟ್ರ ಮಟ್ಟದಲ್ಲಿ ಮಿಂಚಲು ಸಿದ್ದತೆ ಮಾಡಿಕೊಂಡಿದೆ.

2024 ಕನ್ನಡ ಚಿತ್ರರಂಗಕ್ಕೆ ಮಂಕು ಕವಿದ ವರ್ಷ ಎನ್ನಬಹುದು. 2024ರ ಮೊದಲಾರ್ಧದಲ್ಲಿ ಕನ್ನಡ ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡುವಂತ ಯಾವುದೇ ಸಿನಿಮಾಗಳು ಕೂಡ ತೆರೆ ಕಾಣಲಿಲ್ಲ. ಇದರಿಂದ ಬೇಸತ್ತ ಕನ್ನಡ ಚಿತ್ರರಂಗದ ಹಿರಿಯರೆಲ್ಲ ಸೇರಿ ದೇವರ ಮೊರೆ ಹೋಗಿದ್ದು ಉಂಟು.

ಇದನ್ನೂ ಓದಿ :ಪತ್ನಿ ಕಿರುಕುಳಕ್ಕೆ ಪತಿ ಆತ್ಮಹತ್ಯೆ : ಗಂಡನ ಶವ ನೋಡಲು ಬಂದ ಹೆಂಡತಿಗೆ ಬಿತ್ತು ಗೂಸಾ !

ಇದಾದ ಮೇಲೆ ಕಾಕತಾಳೀಯವೋ ಅಥವಾ ದೇವರ ಅನುಗ್ರಹವೋ ಎಂಬತೆ ಗಣೇಶ್​ ಅಭಿನಯದ ‘ಕೃಷ್ಣಂ ಪ್ರಣಯ ಸಖಿ ‘ ಮತ್ತು ದುನಿಯಾ ವಿಜಯ್​ ಅಭಿನಯದ ‘ಭೀಮಾ’ ಸಿನಿಮಾ ಕೊಂಚ ಮಟ್ಟಿಗೆ ಕುಂಟುತ್ತಿದ್ದ ಸ್ಯಾಂಡಲ್​ ವುಡ್​ಗೆ ಚೇತರಿಕೆ ನೀಡಿದ್ದವು. ಆದರೆ ಇದರ ಬೆನ್ನಲ್ಲೆ ಬಂದ ಬಹುನೀರಿಕ್ಷಿತ ಮಾರ್ಟಿನ್​ ಸಿನಿಮಾ ಸೋಲು ಕಾಣಾ ಬೇಕಾಗಿ ಬಂತು. ಆದರೆ ಇಡೀ ವರ್ಷದ ಸೋಲನ್ನು ಸೋಲಿಸುವ ರೀತಿಯಲ್ಲಿ ವರ್ಷಂತ್ಯದಲ್ಲಿ ಉಪೇಂದ್ರ ನಟಿಸಿ, ನಿದೇರ್ಶಸಿದ ‘ಯುಐ’ ಸಿನಿಮಾ ಮತ್ತು ನಟ ಸುದೀಪ್​ ನಟನೆಯ ‘ಮ್ಯಾಕ್ಸ್​’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ.

ಹೇಗಿದೆ 2025ರ ಸ್ಯಾಂಡಲ್​ವುಡ್​ ಟೈಮ್​ಟೇಬಲ್​ !

  • ರಾಕಿ ಭಾಯ್​ ಯಶ್​ ನಟನೆಯ ‘ಟಾಕ್ಸಿಕ್​’ 

2025ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ರಾಕಿಂಗ್​ ಸ್ಟಾರ್​ ನಟನೆಯ ಟಾಕ್ಸಿಕ್​ ಸಿನಿಮಾ ಮೊದಲ ಸ್ಥಾನದಲ್ಲಿದೆ. ಕೆಜಿಎಫ್​ ನಂತರ ಕಾಣೆಯಾಗಿರುವ ನಟ ಯಶ್​ ಈ ವರ್ಷವಾದರೂ ತಮ್ಮ ಅಭಿಮಾನಿಗಳಿಗೆ ದರ್ಶನ್​ ನೀಡುತ್ತಾರಾ ಎಂಬ ಕುತೂಹಲವಿದೆ. ಆದರೆ ಇದರ ಬಗ್ಗೆ ಇಲ್ಲಿಯವರೆಗೂ ಸಿನಿಮಾದ ಬಗ್ಗೆ ಹೆಚ್ಚು ವಿಶಯಗಳು ಎಲ್ಲಿಯೂ ಬಹಿರಂಗಗೊಂಡಿಲ್ಲ.

  • ಕಾಂತಾರಾ ಚಾಪ್ಟರ್​ 01

ಹೊಂಬಾಳೆ ಬ್ಯಾನರ್​ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಕಾಂತಾರ ಚಾಪ್ಟರ್​ 1 ಸಿನಿಮಾ ಈ ಬಾರಿ ಕುತೂಹಲ ಕೇಂದ್ರವಾಗಿರುವ ಸಿನಿಮಾಗಳ ಪೈಕಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಕೇವಲ 30 ಕೋಟಿ ಬಂಡವಾಳ ಹೂಡಿದ್ದ ಕಾಂತಾರ ಸಿನಿಮಾ ದೇಶದೆಲ್ಲಡೆ ಬಾರಿ ಸದ್ದು ಮಾಡಿತ್ತು. ಇದೀಗ ಇದರ ಮತ್ತೊಂದು ಭಾಗ ಭಾರಿ ಕುತೂಹಲ ಮೂಡಿಸಿದೆ. ಚಿತ್ರತಂಡ ಈಗಾಗಲೆ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದು. 2025ರ ಅಕ್ಟೋಬರ್​ 02ರಂದು ಸಿನಿಮಾ ಬಿಡುಗಡೆಯಾಗಿಲಿದೆ.

  • ಬಿಲ್ಲಾ ರಂಗಾ ಭಾಷಾ 

ಸುದೀಪ್ ನಟನೆಯ ‘ಬಿಲ್ಲಾ ರಂಗ ಭಾಷಾ’ ಸಿನಿಮಾ ಇದೇ ವರ್ಷ ಬಿಡುಗಡೆ ಆಗುವ ಸಾಧ್ಯತೆ ಇದೆ. ಸಿನಿಮಾದ ಚಿತ್ರೀಕರಣ ಇನ್ನೂ ಪ್ರಾರಂಭವಾಗಿಲ್ಲವಾದರೂ ಕತೆ ಅಂತಿಮವಾಗಿದೆ ಎನ್ನಲಾಗುತ್ತಿದೆ. ಈ ಸಿನಿಮಾವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡುತ್ತಿದ್ದಾರೆ. ಇದೇ ವರ್ಷ ಸುದೀಪ್​ರ ಮತ್ತೊಂದು ಸಿನಿಮಾ ಸಹ ಬಿಡುಗಡೆ ಆಗುವ ಸಾಧ್ಯತೆ ಇದೆ.

  • ದರ್ಶನ್​ ನಟನೆಯ ‘ಡೆವಿಲ್ ‘

ನಟ ದರ್ಶನ್​ ನಟನೆಯ ಡೆವಿಲ್​ ಸಿನಿಮಾ ಎಲ್ಲಾ ಅಂದುಕೊಂಡಂತೆ ಹಾಗಿದ್ದರೆ 2024ರ ಡಿಸೆಂಬರ್​ನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ದರ್ಶನ್​ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋದ ಕಾರಣ ಸಿನಿಮಾದ ಬಿಡಗಡೆ ತಡವಾಗಿದೆ. ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್​ ಸಿನಿಮಾದ ಡಬ್ಬಿಂಗ್ ಕೆಲಸಗಳನ್ನು ಶುರು ಮಾಡಿದ್ದು. ಈ ವರ್ಷ ತೆರೆಯ ಮೇಲೆ ಬರುವ ಯೋಜನೆ ರೂಪಿಸಿದ್ದಾರೆ. ಆದರೆ ಮತ್ತೊಂದೆಡೆ ಪೊಲೀಸರು ದರ್ಶನ್​ಗೆ ನೀಡಿದ್ದ ಜಾಮೀನನ್ನು ಪ್ರಶ್ನಿಸಿಕೊಂಡು ಸುಪ್ರಿಂ ಮೆಟ್ಟಿಲ್ಲತ್ತಿದ್ದು. ದರ್ಶನ್​ಗೆ ನೀಡಿದ್ದ ಬೇಲ್​ ಕ್ಯಾನ್ಸಲ್ ಆದರೆ ಮತ್ತೆ ಜೈಲು ಸೇರುವ ಭೀತಿಯಲ್ಲೂ ಇದ್ದಾರೆ ಎನ್ನಬಹುದು.

  • ಡಾಲಿ, ಶಿವಣ್ಣ ಅಭಿನಯದ ‘ಉತ್ತರ ಕಾಂಡ’

ಡಾಲಿ ಧನಂಜಯ್, ಶಿವರಾಜ್ ಕುಮಾರ್ ಇನ್ನೂ ಕೆಲವು ಪ್ರತಿಭಾನ್ವಿತ ನಟರು ನಟಿಸಿರುವ ‘ಉತ್ತರಕಾಂಡ’ ಸಿನಿಮಾ ಸಹ ಕಳೆದ ವರ್ಷವೇ ಬಿಡುಗಡೆ ಆಗಬೇಕಿತ್ತು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಈ ಸಿನಿಮಾದ ಬಿಡುಗಡೆ ತಡವಾಗಿದೆ. ಈ ಸಿನಿಮಾದ ಟೀಸರ್​ ಈಗಾಗಲೇ ಬಿಡುಗಡೆ ಆಗಿ ಗಮನ ಸೆಳೆದಿದೆ. ಈ ಸಿನಿಮಾ ಮೇಲೂ ನಿರೀಕ್ಷೆ ಇಟ್ಟುಕೊಳ್ಳಬಹುದಾಗಿದೆ.

  • ಧ್ರುವ ಸರ್ಜಾ ಅಭಿನಯದ ‘KD’ 

ಪ್ರೇಮ್ ನಿರ್ದೇಶನ ಮಾಡಿ ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ‘ಕೆಡಿ’ ಸಿನಿಮಾ ಸಹ ಈ ವರ್ಷದ ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಈ ಸಿನಿಮಾದ ಹಾಡೊಂದು ಇತ್ತೀಚೆಗೆ ಬಿಡುಗಡೆ ಆಗಿದ್ದು, ಗಮನ ಸೆಳೆಯುತ್ತಿದೆ. ‘ಕೆಡಿ’ ಸಿನಿಮಾದಲ್ಲಿ ಶಿಲ್ಪಶೆಟ್ಟಿ ಸೇರಿದಂತೆ ಹಲವು ತಾರೆಯರು ಒಟ್ಟಿಗೆ ಕೆಲಸ ಮಾಡಿದ್ದಾರೆ.

  • ರಕ್ಷಿತ್​ ಶೆಟ್ಟಿ ಅಭಿನಯದ ‘ರಿಚರ್ಡ್​ ಆಂಟೋನಿ’

ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡಿ, ನಟಿಸುತ್ತಿರುವ ‘ರಿಚರ್ಡ್ ಆಂಟೊನಿ’ ಸಿನಿಮಾ ಇದೇ ವರ್ಷ ಬಿಡುಗಡೆ ಆಗುವ ಸಾಧ್ಯತೆ ಇದೆ. ಸಿನಿಮಾದ ಚಿತ್ರೀಕರಣ ಇನ್ನೂ ಪ್ರಾರಂಭ ಆಗಿಲ್ಲ. ಸಿನಿಮಾದ ಕತೆಯಲ್ಲಿ ರಕ್ಷಿತ್ ಶೆಟ್ಟಿ ಸಾಕಷ್ಟು ಸಮಯ ವ್ಯಯಿಸುತ್ತಿದ್ದಾರೆ. ಒಂದೊಮ್ಮೆ ಇದೇ ವರ್ಷ ಈ ಸಿನಿಮಾ ಬಿಡುಗಡೆ ಆದರೆ ಖಂಡಿತ ಗಮನ ಹರಿಸಬೇಕಾದ ಸಿನಿಮಾ ಇದಾಗಲಿದೆ.

ಇವಷ್ಟೆ ಅಲ್ಲದೆ ಇನ್ನೂ ಅನೇಕ ಚಿತ್ರಗಳು ಈ ವರ್ಷ ಬಿಡುಗಡೆಯಾಗಲಿದ್ದು. ಯಾವ ಸಿನಿಮಾ ಗಲ್ಲಾಪಟ್ಟಿಗೆಯನ್ನು ಧೂಳಿ ಪಟ ಮಾಡಲಿದೆ ಎಂಬುದನ್ನು ನೋಡಬೇಕಿದೆ.

RELATED ARTICLES

Related Articles

TRENDING ARTICLES