ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಗೆ ನೂರಾರು ಕೋಟಿ ರೂಪಾಯಿ ಆದಾಯ ಹರಿದುಬಂದಿದೆ. ನಿನ್ನೆ ಒಂದೇ ದಿನದಲ್ಲಿ ಕೆಎಸ್ಬಿಸಿಎಲ್ನಿಂದ ಬರೋಬ್ಬರಿ 308 ಕೋಟಿ ರೂ. ಮದ್ಯ ಮಾರಾಟವಾಗಿದೆ. ಡಿ.31 ರ ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ 308 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಅಬಕಾರಿ ಇಲಾಖೆ 250 ಕೋಟಿ ರೂ. ಮದ್ಯ ಮಾರಾಟದ ಟಾರ್ಗೆಟ್ ಇಟ್ಟುಕೊಂಡಿತ್ತು.
ಐಎಂಎಲ್- 4,83,715 ಲಕ್ಷ ಬಾಕ್ಸ್ ಮಾರಾಟದಿಂದ 250.25 ಕೋಟಿ ಆದಾಯ ಬಂದಿದೆ. ಬಿಯರ್- 2,92,339 ಲಕ್ಷ ಬಾಕ್ಸ್ ಮಾರಾಟದಿಂದ 57,75 ಕೋಟಿ ಆದಾಯ ಹರಿದುಬಂದಿದೆ. ಒಟ್ಟಾರೆ 7,76,042 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ 308 ಕೋಟಿ ರೂ. ಆದಾಯವಾಗಿದೆ.
ಡಿಸೆಂಬರ್ 27 ಶುಕ್ರವಾರದಂದು ದಾಖಲೆಯ ಪ್ರಮಾಣದ ಮಧ್ಯ ಮಾರಾಟವಾಗಿದ್ದು. ಸುಮಾರು 401.58 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಟವಾಗಿತ್ತು.
ಇದನ್ನೂ ಓದಿ : ನ್ಯೂ ಇಯರ್ ಸೆಲಬ್ರೇಶನ್ ಮುಗಿಸಿ ಹೋಗುವಾಗ ಅಪಘಾತ : ಇಬ್ಬರು ಸ್ಥಳದಲ್ಲೆ ಸಾ*ವು !
ನೆಶೆಯಲ್ಲಿ ವಾಹನ ಚಾಲನೆ ಮಾಡಿದವರಿಗೆ ದಂಡ ವಿಧಿಸಿದ ಪೊಲೀಸರು !
ಹೊಸ ವರ್ಷದ ಪಾರ್ಟಿ ಮೂಡ್ನಲ್ಲಿ ಕುಡಿದು ವಾಹನ ಚಾಲನ ಮಾಡುತ್ತಿದ್ದವರ ರಾತ್ರಿ ಪೊಲೀಸರು ಶಾಕ್ ನೀಡಿದ್ದು. ಒಂದೆ ರಾತ್ರಿಯಲ್ಲಿ ಸುಮಾರು 513 ಕೋಟಿ ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳು ದಾಖಲಾಗಿವೆ. ನೆನ್ನೆ ಒಂದೆ ರಾತ್ರಿಯಲ್ಲಿ 28,127 ವಾಹನಗಳನ್ನು ಪರಿಶೀಲನೆ ನಡೆಸಿರುವ ಪೊಲೀಸರು ಕುಡಿದು ವಾಹನ ಚಾಲನೆ ಮಾಡಿದವರಿಂದ ದಂಡ ವಸೂಲಿ ಮಾಡಿದ್ದಾರೆ.


