ಬೆಂಗಳೂರು : ನಟ ದರ್ಶನ್ ಮತ್ತೆ ಸಿನಿ ಅಖಾಡಕ್ಕೆ ದುಮುಕಿದ್ದಾರೆ. 6 ತಿಂಗಳ ಸೆರೆಮನೆ ವಾಸವನ್ನು ಅನುಭವಿಸಿ ಹೊರಬಂದಿರುವ ದಾಸ ಇಂದಿನಿಂದ ತಮ್ಮ ಡೆವಿಲ್ ಸಿನಿಮಾದ ಡಬ್ಬಿಂಗ್ ಕೆಲಸವನ್ನು ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ಹುಟ್ಟುಹಬ್ಬಕ್ಕೆ ಊರಲ್ಲಿ ಇರಲ್ಲ ಎಂದ ಯಶ್ : ಕಳೆದ ವರ್ಷದ ದುರ್ಘಟನೆಯನ್ನು ಮರೆತಿಲ್ಲವೆ ರಾಕಿಭಾಯ್
ಹೌದು.. ನಟ ದರ್ಶನ್ ಜೀವನದಲ್ಲಿ ಹೊಸ ವರ್ಷ, ಹೊಷ ಹುರುಪನ್ನು ತಂದುಕೊಟ್ಟಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್, ಹೈಕೋರ್ಟ್ನಿಂದ ಜಾಮೀನು ಪಡೆದು ಹೊರಬಂದಿದ್ದಾರೆ. ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿರುವ ಕಾರಣದಿಂದ ಈಗಲೆ ಶೂಟಿಂಗ್ನಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿದು ಬಂದಿದೆ.
ಆದರೆ ಇಂದಿನಿಂದ ದರ್ಶನ್ ನಟನೆಯ ಡೆವಿಲ್ ಸಿನಿಮಾದ ಕೆಲಸಗಳಿಗೆ ಕಿಕ್ ಸ್ಟಾರ್ಟ್ ದೊರೆಯಲಿದ್ದು. ಈಗಾಗಲೇ ಶೂಟಿಂಗ್ ಮುಗಿದಿರುವ ಭಾಗಗಳಿಗೆ ಡಬ್ಬಿಂಗ್ ನಡೆಸಲಾಗುತ್ತಿದೆ ಎಂದು ಮಾಹಿತಿ ದೊರೆತಿದೆ.


