ಹಾಸನ: ಪ್ರೇಯಸಿಯೊಬ್ಬಳು ಪ್ರೀತಿಸುತ್ತಿದ್ದ ಪ್ರೇಮಿಗೆ ಚಾಕುವಿನಿಂದ ಇರಿದಿರುವ ಘಟನೆ ಹಾಸನದಲ್ಲಿ ನಡೆದಿದ್ದು. ಹೊಸವರ್ಷ ಸಂಭ್ರಮದಲ್ಲಿದ್ದ ಪ್ರಿಯಕರ ಐಸಿಯು ಪಾಲಾಗಿದ್ದಾನೆ ಎಂದು ಮಾಹಿತಿ ದೊರೆತಿದೆ. ಗಾಯಾಳು ಪ್ರಿಯಕರನನ್ನು ಮನುಕುಮಾರ್ ಎಂದು ಗುರುತಿಸಿದ್ದು. ಯುವತಿಯನ್ನು ಭವಾನಿ ಎಂದು ಗುರುತಿಸಲಾಗಿದೆ.
ಹಾಸನ ತಾಲ್ಲೂಕಿನ, ಎ.ಗುಡುಗನಹಳ್ಳಿ ಗ್ರಾಮದ ಮನುಕುಮಾರ್ ಹಾಗೂ ಭವಾನಿ ಜೊತೆಯಲ್ಲಿಯೆ ವಿಧ್ಯಾಬ್ಯಾಸ ಮಾಡಿದ್ದರು. ಈ ವೇಳೆ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಆದರೆ ಕೆಲದಿನಗಳಿಂದ ಇಬ್ಬರು ಪರಸ್ಪರ ದೂರವಾಗಿದ್ದರು.
ಇದನ್ನೂ ಓಧಿ : KSRTC ಬಸ್ ಬ್ರೇಕ್ಫೇಲ್ : ಹೊಸವರ್ಷದ ಮೊದಲ ದಿನವೇ ತಪ್ಪಿತು ಭಾರಿ ದುರಂತ !
ನಿನ್ನೆ ಹಾಸನ ನಗರದ ಬಿ.ಎಂ. ರಸ್ತೆಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಮನುಕುಮಾರ್ ಮತ್ತು ಸ್ನೇಹಿತರು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದರು. ಈ ವೇಳೆ ಭವಾನಿ ತನ್ನ ಪ್ರೇಮಿಗೆ ಅನೇಕ ಭಾರಿ ಕರೆ ಮಾಡಿದ್ದಾಳೆ. ಆದರೆ ಮನು ಕರೆ ಸ್ವೀಕಾರ ಮಾಡದೆ ಇದ್ದ ಕಾರಣದಿಂದ ಹೋಟೆಲ್ ಬಳಿ ಬಂದ ಭವಾನಿ ಹೋಟೆಲ್ ಒಳಗೆ ಪ್ರವೇಶ ಮಾಡುವ ವೇಳೆ ಮನುಕುಮಾರ್ ಹೋಟೆಲ್ ಗೇಟ್ನಲ್ಲಿ ಯುವತಿಗೆ ಎದುರು ಬಂದಿದ್ದಾನೆ. ಈ ವೇಳೆ ಅಲ್ಲೆ ಇದ್ದ ಮನುಕುಮಾರ್ ಸ್ನೇಹಿತರು ಜಗಳವನ್ನು ಬಿಡಿಸಲು ಯತ್ನಿಸಿದ್ದಾನೆ. ಈ ವೇಳೆ ಏಕಾಏಕಿ ಭವಾನಿ ಚಾಕು ತೆಗೆದುಕೊಂಡು ಮನುಗೆ ಇರಿದಿದ್ದಾಳೆ.
ಗಾಯಗೊಂಡ ಮನುಕುಮಾರ್ನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಮನುಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಕೆ,ಆರ್.ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ದೊರೆತಿದೆ


