ಕುಡಿದ ಮತ್ತಿನಲ್ಲಿ ವಿದ್ಯುತ್​ ತಂತಿ​ ಮೇಲೆ ಮಲಗಿದ ಭೂಪ

ಅಮರಾವತಿ: ಕುಡಿದವರು ವಿಚಿತ್ರವಾಗಿ ವರ್ತಿಸುತ್ತಾರೆ.. ಕುಡಿತದ ಮತ್ತಿನಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ತಿಳಿಯದೇ ವರ್ತಿಸುತ್ತಾರೆ. ಅವರ ವರ್ತನೆ ಕೆಲವೊಮ್ಮೆ ನಗು ತರಿಸುತ್ತದೆಯಾದರೂ ಇನ್ನೂ ಕೆಲವೊಮ್ಮೆ ಆಕ್ರೋಶ ಮತ್ತು ಭಯವನ್ನುಂಟು ಮಾಡುತ್ತದೆ.

ಕುಡಿತದ ಚಟಕ್ಕೆ ದಾಸನಾಗಿರುವ ವೆಂಕಣ್ಣ ಎಂಬ ಯುವಕ ತನ್ನ ತಾಯಿ ಮದ್ಯಪಾನಕ್ಕೆ ಹಣ ನೀಡಲಿಲ್ಲ ಎಂದು ಮನೆ ಬಳಿ ಇದ್ದ ಹೈ ಟೆನ್ಷನ್ ವೈರ್ ಮೇಲೆ ಮಲಗಿರುವ ಅಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇಂತಹ ಒಂದು ಘಟನೆ ಆಂಧ್ರ ಪ್ರದೇಶದಲ್ಲಿ ವರದಿಯಾಗಿದ್ದು, ಆಂಧ್ರ ಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಎಂ.ಸಿಂಗಾಪುರಂ ಗ್ರಾಮದಲ್ಲಿ  ನಡೆದಿದೆ. ಕುಡಿದ ಮತ್ತಿನ್ನಲ್ಲಿದ್ದ ಯುವಕ ವೆಂಕಣ್ಣ  ತನ್ನ ತಾಯಿಯ ಬಳಿ ಕುಡಿಯಲು ಹಣ ಬೇಕು ಅದಕ್ಕೆ ಆತನ ತಾಯಿ ನಿರಾಕರಿಸಿದ್ದಕ್ಕೆ ಇದ್ದಕ್ಕಿದ್ದಂತೆ ವಿದ್ಯುತ್ತ ಕಂಬವನ್ನೇರಲು ಆರಂಭಿಸಿದ್ದಾನೆ.

ಇದನ್ನೂ ಓದಿ : 2025ರಲ್ಲಿ ತೆರೆಕಾಣಲಿರುವ ಬಹುನಿರೀಕ್ಷಿತ ಕನ್ನಡ ಸಿನಿಮಾಗಳು ಯಾವುವು ಗೊತ್ತೇ ?

ಆದರೆ ಈತನ ಹುಚ್ಚಾಟವನ್ನು ಅರಿತ ಗ್ರಾಮಸ್ಥರು ತಕ್ಷಣವೆ ಗ್ರಾಮದ ಟ್ರಾನ್ಸ್​ಫಾರಂ ಬಳಿಗೆ ಹೋಗಿ ವಿದ್ಯುತ್​ ಸರಬರಾಜನ್ನು ನಿಲ್ಲಿಸಿದ್ದಾರೆ. ಅಷ್ಟು ಹೊತ್ತಿಗಾಗಲೇ ಯುವಕ ಸಂಪೂರ್ಣ ಕಂಬವನ್ನು ಏರಿ ಅದರ ಮೇಲೆ ಮಲಗಿಕೊಂಡಿದ್ದಾನೆ. ಅರ್ಧ ಗಂಟೆಗೂ ಹೆಚ್ಚು ಕಾಲ ವಿದ್ಯುತ್​ ತಂತಿಯ ಮೇಲೆ ಸಮಯ ಕಳೆದಿರುವ ವೆಂಕಣ್ಣನನ್ನು ಇಳಿಸಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದಾರೆ.

ನಂತರ ಗ್ರಾಮಸ್ಥರು ಹಣ ನೀಡುವುದಾಗಿ ಹೇಳಿ ಮನವೊಲಿಸಿ ಯುವಕನನ್ನು ಕೆಳಗೆ ಇಳಿಸುವಲ್ಲಿ ಸಫಲರಾಗಿದ್ದಾರೆ. ಆದರೆ ಯುವಕನು ಮಾಡಿದ ಕೃತ್ಯವಂತು ನಿಜಕ್ಕೂ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ ಎಂದರೆ ಅದು ತಪ್ಪಾಗಲಾರದು.

RELATED ARTICLES

Related Articles

TRENDING ARTICLES