Site icon PowerTV

ತಲೆ ಬುರುಡೆ ಇಟ್ಟು ವಾಮಚಾರ : ಬೆಚ್ಚಿ ಬಿದ್ದ ಏರಿಯಾ ಜನ !

ಬಳ್ಳಾರಿ : ಜಿಲ್ಲೆಯ ಮಾರ್ಕಂಡೇಯಾ ಕಾಲೋನಿಯಲ್ಲಿ ನಡೆದಿರುವ ವಾಮಾಚಾರ ನೋಡಿ ಇಡೀ ಗ್ರಾಮದ ಜನರು ಭಯಬೀತರಾಗಿದ್ದು. ವಾಪಾಚಾರ ಮಾಡಿದವರನ್ನು ಪತ್ತೆ ಹಚ್ಚಲು ಪೊಲೀಸ್​ ಗಸ್ತು ಹೆಚ್ಚಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬಳ್ಳಾರಿಯ ಮಾರ್ಕಂಡೇಯ ಕಾಲೋನಿಯಲ್ಲಿ ವಾಮಾಚಾರ ನಡೆದಿದ್ದು. ಅಮವಾಸೆ ಹಿನ್ನಲೆಯಲ್ಲಿ ಯಾರೋ ದುರುಳರು ಇಂತಹ ಕಾರ್ಯಕ್ಕೆ ಕೈ ಹಾಕಿದ್ದಾರೆ. ನಾಲ್ಕು ತಲೆ ಬುರುಡೆ, ಎಲುಬುಗಳನ್ನು ಮುಂದಿಟ್ಟು, ಕೂದಲನ್ನು ಸುಟ್ಟು, ವಾಮಚಾರ ಮಾಡಿದ್ದಾರೆ. ಇದರಿಂದ ಇಡೀ ಗ್ರಾಮದ ಜನರು ಭಯಭೀತರಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಹೊಸ ವರ್ಷದ ಹೊಸ್ತಿಲಲ್ಲಿ ದರ್ಶನ್​ಗೆ ಬಿಗ್​ ಶಾಕ್​ : ಸುಪ್ರೀಂಕೋರ್ಟ್ ಕದ ತಟ್ಟಿದ ಪೊಲೀಸರು !

ವಾಮಚಾರ ನಡೆದಿರುವ ಸ್ಥಳದಲ್ಲಿ ನೀರಿನ ಟ್ಯಾಂಕ್​ ಮತ್ತು ಅಂಗನವಾಡಿ ಇದ್ದು. ಸ್ಥಳೀಯರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹೆದರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನೆ ಬಗ್ಗೆ ಸ್ಥಳೀಯರು ಪೊಲೀಸರ ಮೊರೆ ಹೋಗಿದ್ದು. ಸ್ಥಳದಲ್ಲಿ ಸಿಸಿ.ಕ್ಯಾಮರ ಅಳವಡಿಸಿ, ಪೊಲೀಸ್​ ಗಸ್ತು ಹೆಚ್ಚಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಾಮಚಾರದ ವಸ್ತುಗಳನ್ನು ತೆರವುಗೊಳಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

Exit mobile version