ಕೊಡಗು : ಜಮ್ಮು ಕಾಶ್ಮೀರದಲ್ಲಿ ಸೇನಾ ವಾಹನ ಪ್ರಪಾತಕ್ಕೆ ಬಿದ್ದು ಕರ್ನಾಟಕ ಮೂಲದ 3 ಜನ ಯೋದರು ಹುತಾತ್ಮರಾಗಿದ್ದರು. ಇದೀಗ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದ್ದು. ಮತ್ತೊಬ್ಬ ಕರ್ನಾಟಕ ಮೂಲದ ಸೈನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.
ಡಿಸೆಂಬರ್ 25ರಂದು ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್‌ನ ಬಲ್ನೋಯಿ ಪ್ರದೇಶದಲ್ಲಿ ಸೇನಾ ವಾಹನ 150 ಅಡಿ ಕಂದಕಕ್ಕೆ ಉರುಳಿ ಕರ್ನಾಟಕ ಮೂಲದ ಮೂವರು ಸೇರದಂತೆ ಒಟ್ಟು 5 ಜನ ಸಾವಿಗೀಡಾಗಿದ್ದರು. ಅನೇಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಮತ್ತೊಬ್ಬ ಕೊಡುಗು ಮೂಲದ ಯೋಧ ಹುತಾತ್ಮರಾಗಿದ್ದಾರೆ ಎಂದು ಮಾಹಿತಿ ದೊರೆತಿದೆ.
ಇದನ್ನೂ ಓದಿ :2024ರಲ್ಲಿ ಜನರಿಗೆ ಹೆಚ್ಚು ಇಷ್ಟವಾದ ಟಾಪ್ 5 ಹಾಡುಗಳು ಯಾವುವು ಗೊತ್ತೇ !
ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರ ಗ್ರಾಮದ ಯೋಧ ದಿವಿನ್ (28) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಹುತಾತ್ಮರಾಗಿದ್ದಾರೆ. ತಂದೆ, ತಾಯಿಯ ಏಕೈಕ ಮಗನಾಗಿದ್ದ ದಿವಿನ್ ಕಳೆದ 10 ವರ್ಷದಿಂದ ಸೇನೆಯಲ್ಲಿ ಸೇವೆಸಲ್ಲಿಸುತ್ತಿದ್ದರು. ಇತ್ತೀಚೆಗೆ ದಿವಿನ್ಗೆ ಮದುವೆಯು ನಿಶ್ಚಯವಾಗಿತ್ತು.
ತಾಯಿಯ ಕರೆಗೆ ಕಣ್ಣಿನ ಮೂಲಕವೆ ಸ್ಪಂದಿಸಿದ್ದ ವೀರ ಯೋಧ !
ಕಾಶ್ಮೀರದಲ್ಲಿ ಸೇನಾವಾಹನ ಪ್ರಪಾತಕ್ಕೆ ಬಿದ್ದು ದಿವಿನ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವಿಶಯವನ್ನು ಸೇನಾ ಅಧಿಕಾರಿಗಳು ದಿವಿನ್ ತಾಯಿ ಜಯ ಅವರಿಗೆ ತುರ್ತು ಕರೆ ಮಾಡಿ ತಿಳಿಸಿದ್ದರು. ಜಯ ಅವರು ಕೂಡ ಶ್ರೀನಗರದ ಆಸ್ಪತ್ರೆಗೆ ತಲುಪಿದ್ದರು. ತನ್ನ ತಾಯಿಯ ಕರೆಗೆ ದಿವಿನ್ ಕಣ್ಣಿನ ಮೂಲಕವೆ ಸ್ಪಂದಿಸಿದ್ದರು. ಆದರೆ ದಿವಿನ್ ಅವರ ಶ್ವಾಸಕೋಶಕ್ಕೆ ತೀವ್ರ ಹಾನಿಯಾದ ಕಾರಣ ನಿನ್ನೆ ರಾತ್ರಿ ದಿವಿನ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.



Pinco oyun saytı 24/7 işləyir. Yeni oyunçular üçün kampaniyalar artıq başladı https://pinkoaz.website.yandexcloud.net/. Pinco-da qeydiyyat pulsuzdur.
Pinco betdə əmsallar çox cəlbedicidir.