Site icon PowerTV

ಮ್ಯಾಕ್ಸ್​​ಗೆ ಶುಭಕೋರಿದ ರಾಜಮೌಳಿ : ನಾಳೆ ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಣೆ ಮಾಡಲಿರೋ ಕಿಚ್ಚ !

ಬೆಂಗಳೂರು: ಡಿಸೆಂಬರ್ 25ರಂದು ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿರುವ ಮ್ಯಾಕ್ಸ್ ಚಿತ್ರವನ್ನು ನಾಳೆ ಕಿಚ್ಚ ಸುದೀಪ್​ ತಮ್ಮ ಅಭಿಮಾನಿಗಳೊಂದಿಗೆ ನರ್ತಕಿ ಚಿತ್ರಮಂದಿರದಲ್ಲಿ ವಿಕ್ಷೀಸಲಿದ್ದಾರೆ ಎಂದು ಮಾಹಿತಿ ದೊರೆತಿದೆ. ಇದರ ನಡುವೆ ಖ್ಯಾತ ನಿರ್ದೇಶಕ ರಾಜ್​ಮೌಳಿ ಚಿತ್ರಕ್ಕೆ ಶುಭ ಕೋರಿದ್ದು. ಆದಷ್ಟು ಬೇಗ ಸಿನಿಮಾ ವಿಕ್ಷೀಸುವುದಾಗಿ ಹೇಳಿದ್ದಾರೆ.

ಹೌದು.. ಡಿಸೆಂಬರ್ ನಲ್ಲಿ ಬಿಡುಗಡೆಯಾದ ಉಪೇಂದ್ರ ಅಭಿನಯದ ಯುಐ ಮತ್ತು ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರಗಳೆರಡೂ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಮಾಡುತ್ತಿದ್ದು, ಪ್ರಮುಖವಾಗಿ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರದ ಗಳಿಕೆ ಯುಐಗಿಂತ ಮುಂದಿದೆ ಎನ್ನಲಾಗಿದೆ. ಮ್ಯಾಕ್ಸ್​ ಸಿನಿಮಾ ಭಾನುವಾರ ಭರ್ಜರಿ ಕಲೆಕ್ಷನ್​ ಮಾಡಿದ್ದು. ಕೇವಲ 5 ದಿನಕ್ಕೆ 28 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಮಾಹಿತಿ ದೊರೆತಿದೆ.

ಇದನ್ನೂ ಓದಿ :ಕೇರಳ ‘ಮಿನಿ ಪಾಕಿಸ್ತಾನವಾಗಿದೆ’ ಅದಕ್ಕೆ ಅಲ್ಲಿ ರಾಹುಲ್​, ಪ್ರಿಯಾಂಕ ಗೆದ್ದಿದ್ದಾರೆ : ನಿತೀಶ್​ ರಾಣೆ

ಇದರ ಬೆನ್ನಲ್ಲೆ ನಾಳೆ (ಡಿ.31) ಕಿಚ್ಚ ಸುದೀಪ್​ ತಮ್ಮ ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಣೆ ಮಾಡಲಿದ್ದಾರೆ. ಇದರ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಟ ಕಿಚ್ಚ ಸುದೀಪ್​ ಬರೆದುಕೊಂಡಿದ್ದು. ನಾಳೆ ಬೆಳಿಗ್ಗೆ 10 ಗಂಟೆಗೆ ಗಾಂಧಿನಗರದ ನರ್ತಕಿ ಚಿತ್ರಮಂದಿರದಲ್ಲಿ ಚಿತ್ರವೀಕ್ಷಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಚಿತ್ರಕ್ಕೆ ಶುಭಕೋರಿದ ರಾಜಮೌಳಿ !

ಭಾರತದ ಖ್ಯಾತ ನಿರ್ಮಾಪಕ SS. ರಾಜ್​ಮೌಳಿ ಸಿನಿಮಾದ ಯಶಸ್ಸಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು. ಕಿಚ್ಚ ಸುದೀಪ್​ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಸಿನಿಮಾ ನೋಡಲು ನನಗೆ ಸಮಯ ಸಿಕ್ಕಿಲ್ಲ, ಆದರೆ ನಾನು ಶೀಘ್ರದಲ್ಲೆ ಸಿನಿಮಾ ವೀಕ್ಷಣೆ ಮಾಡುತ್ತೇನೆ ಎಂದು ಟ್ಟಿಟ್​ ಮಾಡಿ ತಿಳಿಸಿದ್ದಾರೆ.

 

Exit mobile version