Site icon PowerTV

ಪ್ರೀತಿಯ ಶ್ವಾನದ ನಿಧನಕ್ಕೆ ಕಣ್ಣೀರಿನ ಪತ್ರ ಬರೆದು ವಿದಾಯ ಹೇಳಿದ ಗೀತಾ ಶಿವರಾಜ್​ಕುಮಾರ್​ !

ನಟ ಶಿವರಾಜ್​ ಕುಮಾರ್​ ಅವರ ಮನೆಯಲ್ಲಿ ಸಾಕಿದ್ದ ಪ್ರೀತಿಯ ಶ್ವಾನ ನೀಮೋ ಸಾವಿಗೀಡಾಗಿದ್ದು. ಇದರ ಬಗ್ಗೆ ಶಿವರಾಜ್ ಕುಮಾರ್ ಅವರ ಧರ್ಮಪತ್ನಿ ಗೀತಾ ಶಿವರಾಜ್​ಕುಮಾರ್​ ಕಣ್ಣೀರು ತರಿಸುವ ಪತ್ರವೊಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

ಸ್ಯಾಂಡಲ್‌ವುಡ್ ನಟ, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಮನೆ ನಾಯಿ ನೀಮೋ ನಿಧನ ಹೊಂದಿದೆ. ಶಿವಣ್ಣರ ದೊಡ್ಡ ಮಗಳು ನಿರುಪಮಾ ಪತಿ ಮದುವೆಗೆ ಮೊದಲು ಆ ನಾಯಿಯನ್ನು ಗಿಫ್ಟ್ ಆಗಿ ಕೊಟ್ಟಿದ್ದರು. ನಿವೇದಿತಾ ವೈದ್ಯರಾಗಿದ್ದ ಕಾರಣ ನಿಮೋವನ್ನು ಸರಿಯಾಗಿ ನೋಡಿಕೊಳ್ಳಲು ಆಗುವುದಿಲ್ಲ ಎಂದು ಅದನ್ನು ಶಿವಣ್ಣರ ಮನೆಗೆ ಬಿಟ್ಟಿದ್ದರು. ಇದೀಗ ಆ ಶ್ವಾನ ಅಸು ನೀಗಿದ್ದು, ಈ ಬಗ್ಗೆ ಗೀತಾ ಶಿವರಾಜ್​ಕುಮಾರ್​ ಅವರು ಸುದೀರ್ಘ ಪತ್ರ ಬರೆದು ತಮ್ಮ ಪ್ರೀತಿಯ ಶ್ವಾನದ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : 

ಗೀತಾ ಶಿವರಾಜ್​ ಕುಮಾರ್​ ನೀಮೋ ಜೊತೆಗಿನ ಒಡನಾಟವನ್ನು ಎಳೆಎಳೆಯಾಗಿ ಬರೆದಿದ್ದು. ನೀಮೋ ಜೊತೆಗೆ  ಶಿವರಾಜ್​ ಕುಮಾರ್​ ಮತ್ತು ಉಳಿದ ಕುಟುಂಬಸ್ಥರು ಹೊಂದಿದ್ದ ಒಡನಾಟವನ್ನು ವಿವರಿಸಿದ್ದಾರೆ. ಕಳೆದ ವಾರವಷ್ಟೆ ಅಮೇರಿಕಾಗೆ ಹೋರಟಿದ್ದ ಶಿವಣ್ಣರನ್ನು ಬೀಳ್ಕೋಟಿದ್ದ ನೀಮೋ ಇಂದು ಅಸು ನೀಗಿದೆ ಎಂಬ ವಿಷಯ ಕುಟುಂಬದವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗದಂತಾಗಿದೆ.

ನೀಮೋ ನಿಧನದಿಂದ ಅಕ್ಷರಷಃ ಸೂತಕದ ವಾತವರಣ ನಿರ್ಮಾಣವಾಗಿದ್ದು. ನಿಮೋವಿನ ಬಗ್ಗೆ ಸುದೀರ್ಘ ಪತ್ರ ಬರೆದಿರುವ ಗೀತಾ ಶಿವರಾಜ್​ ಕುಮಾರ್​ ಅವರ ಪತ್ರ ಈ ಕೆಳಗೆ ಇದೆ.

Exit mobile version