Site icon PowerTV

ಇನ್ಶೂರೆನ್ಸ್​ ಹಣಕ್ಕೆ ತಂದೆಯನ್ನೆ ಕೊಲೆ ಮಾಡಿದ ಪಾಪಿ ಮಗ !

ಮೈಸೂರು: LIC ಹಣದ ಆಸೆಗೆ ಸ್ವಂತ ತಂದೆಯನ್ನೆ ಮಗನೊಬ್ಬ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು. ಕೊಲೆ ಮಾಡಿದ ಆರೋಪಿಯನ್ನು ಪಾಂಡು ಎಂದು ಗುರುತಿಸಲಾಗಿದೆ.

ಮೈಸೂರಿನ, ಪಿರಿಯಾಪಟ್ಟಣ ತಾಲ್ಲೂಕಿನ ಗೆರೋಸಿ ಕಾಲೋನಿಯಲ್ಲಿ ಘಟನೆ ನಡೆದಿದ್ದು. ಪಾಂಡು ಎಂಬಾತ ತನ್ನ ತಂದೆ ಅಣ್ಣಪ್ಪನ ಹೆಸರಿನಲ್ಲಿ ವಿಮೆ ಮಾಡಿಸಿದ್ದನು. ಆ ಹಣವನ್ನು ಲಪಟಾಯಿಸಲು ತನ್ನ ಸ್ವಂತ ತಂದೆಯನ್ನೆ ಮಗ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಸುಸಂಸ್ಕೃತ, ಸಜ್ಜನ, ಮಿತಭಾಷಿ ರಾಜಕಾರಣಿಯನ್ನು ರಾಷ್ಟ್ರ ಕಳೆದುಕೊಂಡಿದೆ : ಸಿದ್ದರಾಮಯ್ಯ

ಟಿಬೇಟಿಯನ್​ ಕ್ಯಾಂಪಿನಲ್ಲಿ ಕೆಲಸ ಇದೆ ಹೋಗಿ ಎಂದು ಹೇಳಿದ್ದ ಮಗ ಪಾಂಡು ಮಾತನ್ನು ಕೇಳಿ ತಂದೆ ಅಪ್ಪಣ್ಣ ಹೋಗುವಾಗ. ಹಿಂದಿನಿಂದ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ನಂತರ ಶವವನ್ನು ಬಿ.ಎಂ.ರಸ್ತೆಯ ಮಂಚದೇವನಹಳ್ಳಿ ಸಮೀಪ ಎಸೆದು. ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಕಥೆ ಕಟ್ಟಿದ್ದನು. ಆದರೆ ದುರಾದೃಷ್ಟವಶಾತ್​ ತಮ್ಮ ಸಾವಿನ ದುಃಖದಲ್ಲಿದ್ದ ಅಪ್ಪಣ್ಣನ ಅಣ್ಣ ಧರ್ಮ ಎಂಬುವವರು ಕೂಡ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಪರಿಚಿತ ವಾಹನ ಡಿಕ್ಕಿ ಹೊಡೆದು ತಂದೆ ಸಾವನ್ನಪ್ಪಿದ್ದಾರೆ ಎಂದು ಪಾಂಡು ಬೈಲುಕುಪ್ಪೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದನು. ಆದರೆ ಅನುಮಾನ ಬಂದ ಹಿನ್ನಲೆ ಪೊಲೀಸರು ಪಾಂಡುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ. ವಿಮೆ ಹಣಕ್ಕೆ ಕೊಲೆ ಮಾಡಿದ್ದನು ಒಪ್ಪಿಕೊಂಡಿದ್ದಾನೆ. ಬೈಲ್​ಕುಪ್ಪೆ ಠಾಣೆ ಸಬ್​ಇನ್ಸ್​ಪೆಕ್ಟರ್​ ಅಜಯ್​ ಕುಮಾರ್​ ತಂಡದ ಕಾರ್ಯಚರಣೆಯಿಂದ ಪ್ರಕರಣ ಬಯಲಿಗೆ ಬಂದಿದೆ.

Exit mobile version