Site icon PowerTV

ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಬಸ್ : ಓಂ ಶಕ್ತಿಗೆ ಹೋಗುತ್ತಿದ್ದ 42 ಜನರಿಗೆ ಗಾಯ !

ತಮಿಳುನಾಡು : ಓಂ ಶಕ್ತಿಗೆ ತೆರಳುತ್ತಿದ್ದ ಬಸ್​ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿರುವ ಘಟನೆ ನಡೆದಿದ್ದು. ಈ ದುರ್ಘಟನೆಯಲ್ಲಿ 40ಕ್ಕೂ ಹೆಚ್ಚು ಓಂ ಶಕ್ತಿ ಭಕ್ತಾಧಿಗಳು ಗಾಯಗೊಂಡಿದ್ದಾರೆ ಎಂದು ಮಾಹಿತಿ ದೊರೆತಿದೆ.

ತಮಿಳುನಾಡಿನ ಧರ್ಮಪುರಿ ಸಮೀಪದ ಇಟ್ಟಿಯoಪಟ್ಟೆ ಗ್ರಾಮದ ಬಳಿಯಲ್ಲಿ ಘಟನೆ ನಡೆದಿದ್ದು. ಉತಂಗರೈ ಚೆನ್ನಮಲೈ ಶಾಲೆ ಬಳಿ ಅಪಘಾತ ಸಂಭವಿಸಿದೆ. ಮಳೆ ಬರುತ್ತಿದ್ದ ಕಾರಣದಿಂದ ಚಾಲಕನ ನಿಯಂತ್ರಣ ತಪ್ಪಿದ ಬಸ್​ ಹಳ್ಳಕ್ಕೆ ಉರುಳಿದೆ ಎಂದು ಊಹಿಸಲಾಗಿದೆ. ಬಸ್​​ ಅಪಘಾತವಾಗುವ ದೃಷ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು. ನೋಡುಗರ ಎದೆ ಝಲ್​ ಎನಿಸುವಂತಿದೆ.

ಇದನ್ನೂ ಓದಿ : 30 ವರ್ಷದ ಮಹಿಳೆ ಜೊತೆಗೆ 15ರ ಬಾಲಕನ ಮದುವೆ : ಪ್ರೀತ್ಸೋದ್​ ತಪ್ಪಾ ಎಂದ ಮಹಿಳೆ !

ಬಸ್​ನಲ್ಲಿದ್ದ 42ಜನ ಓಂ ಶಕ್ತಿ ಭಕ್ತಾಧಿಗಳು ಗಂಭೀರವಾಗಿ ಗಾಯಗೊಂಡಿದ್ದು. ಗಾಯಗೊಂಡವರನ್ನು ಊತಂಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗದೆ. ಘಟನೆ ಸಂಬಂಧ ಊತಂಗೆರೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Exit mobile version