Site icon PowerTV

ಗುತ್ತಿಗೆದಾರ ಸಚಿನ್​ ಆತ್ಮಹತ್ಯೆ ಪ್ರಕರಣ : ಇಬ್ಬರು ಕಾನ್ಸ್​ಟೇಬಲ್​​ಗಳು ಸಸ್ಪೆಂಡ್ !​

ಬೀದರ್‌: ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಬೀದರ್ ಗಾಂಧಿಗಂಜ್ ಪೊಲೀಸ್ ಠಾಣೆಯ ಇಬ್ಬರು ಹೆಡ್ ಕಾನ್‌ಸ್ಟೇಬಲ್‌ಗಳನ್ನು  ಸಸ್ಪೆಂಡ್ ಮಾಡಲಾಗಿದೆ ಎಂದು ಮಾಹಿತಿ ದೊರೆತಿದೆ.

ಮೃತ ಸಚಿನ್​ ಪಾಂಚಳ್​ ಅವರು ಡೆತ್​ ನೋಟ್​ ಬರೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಡೆತ್‌ನೋಟ್ ನೋಡಿ ಗಾಬರಿಗೊಂಡಿದ್ದ ಮೃತ ಸಚಿನ್ ಕುಟುಂಬಸ್ಥರು ಬೀದರ್‌ನ ಗಾಂಧಿಗಂಜ್ ಪೊಲೀಸ್ ಠಾಣೆಗೆ ಧಾವಿಸಿದ್ದರು. ಪೊಲೀಸ್​ ಠಾಣೆಗೆ ಬಂದ ಮೃತ ಸಚಿನ್ ಕುಟುಂಬಸ್ಥರು ಸಚಿನ್​ನನ್ನು ಹುಡುಕಿಕೊಡುವಂತೆ ಕೇಳಿಕೊಂಡಿದ್ದರು.

ಇದನ್ನೂ ಓದಿ: ವಿರೋಧಿಗಳ ಟೀಕೆಗೆ ‘ಇತಿಹಾಸ ನನ್ನ ಮೇಲೆ ದಯೆ ತೋರಲಿದೆ’ ಎಂದು ಉತ್ತರಿಸಿದ್ದ ಮನಮೋಹನ್​ ಸಿಂಗ್​ !

ಆದರೆ ಈ ವೇಳೆ ಠಾಣೆಯಲ್ಲಿದ್ದ ಅಧಿಕಾರಿಗಳು ಮೃತ ಸಚಿನ್​ ಕುಟುಂಬಸ್ಥರ ಮನವಿಗೆ ಸರಿಯಾಗಿ ಸ್ಪಂದಿಸಿಲ್ಲ ಎಂದು ಎಸ್ಪಿ ಪ್ರದೀಪ್​ ಗಂಟಿ ಅವರು ಶ್ಯಾಮಲಾ ಮತ್ತು ರಾಜೇಶ್​ ಎಂಬ ಇಬ್ಬರು ಪೇದೆಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಏನಿದು ಪ್ರಕರಣ ?

ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಸೇರಿದಂತೆ ಏಳು ಜನರ ಮೇಲೆ ಗಂಭೀರ ಆರೋಪ ಮಾಡಿ ಯುವ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಗುರುವಾರ ಬೀದರ್ ನಗರ ಬಸವೇಶ್ವರ ವೃತ್ತದ ಬಳಿಯ ರೈಲ್ವೇ ಹಳಿಗೆ ತಲೆ ಕೊಟ್ಟಿದ್ದರು.

Exit mobile version