Site icon PowerTV

ಮುನಿರತ್ನನಿಗೆ ಸಾವಿನ ಬಗ್ಗೆ ಕನಸು ಬಿದ್ದಿದೆ, ಭಗವಂತ ಅವರ ಪ್ರಾರ್ಥನೆ ಈಡೇರಿಸಲಿ : ಹನುಮಂತರಾಯಪ್ಪ

ಬೆಳಗಾವಿ : ನಾಟಕ ಆಡುತ್ತಿದ್ದಾರೆ, ನೆನ್ನೆ ನಡೆದ ಘಟನೆ ಎಲ್ಲವೂ ಮುನಿರತ್ನ ಪ್ರಾಯೋಜಿತವಾಗಿ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.

ಕುಸುಮ, ಹನುಮಂತರಾಯಪ್ಪ ಮತ್ತು ಡಿ.ಕೆ ಬ್ರದರ್ಸ ನನ್ನ ಕೊಲೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ನಿನ್ನೆ ಶಾಸಕ ಮುನಿರತ್ನ ಬಹಿರಂಗವಾಗಿ ಆರೋಪ ಮಾಡಿದ್ದರು. ಇದರ ಕುರಿತಾಗಿ ಮಾತನಾಡಿದ ಹನುಮಂತರಾಯಪ್ಪ ‘ ನನ್ನ ಕುಟುಂಬದ ಬಗ್ಗೆ ನಿಮಗೆ ಗೊತ್ತು, ಅದರೆ ಮುನಿರತ್ನನ ಚಾರಿತ್ರ್ಯ, ಅವರ ಕುಟುಂಬದ ರೌಡಿಸಂ ಬಗ್ಗೆ ನೋಡಿ. ಅವರ ತಮ್ಮ ರೌಡಿಯಾಗಿದ್ದ. ಚಾಕು ಚೂರಿ ಹಿಡಿದು. ಬಿಬಿಎಂಪಿಯಲ್ಲಿ ಕಳ್ಳ ಬಿಲ್​ ಮಾಡಿಸುತ್ತಿದ್ದ. ಆತನ ಹೆಸರು ಗೂಂಡಾ ಲಿಸ್ಟ್​ನಲ್ಲಿದೆ.

ಆ್ಯಸಿಡ್​ ಹಾಕಿ, ಮೊಟ್ಟೆ ಹಾಕಿ ಎಂದು ಅವರೆ ಹೇಳುತ್ತಾರೆ. ನನ್ನ ಕೊಲೆ ಮಾಡಲು ಪ್ಲಾನ್​ ರೆಡಿಯಾಗಿದೆ ಎಂದು ಹೇಳಿದ್ದಾರೆ. ಒಬ್ಬನೆ ಹೋಗುತ್ತಿದ್ದೆ ಚಾಕು ಹಿಡಿದು ಬಂದರು, ನಾನು ತಪ್ಪಿಸಿಕೊಂಡೆ ಎಂದು ಹೇಳುತ್ತಾರೆ. ಅವರಿಗೆ ಸಾವಿನ ಭ್ರಮೆ ಬಂದಿದೆ. ಆದರೆ ನಾವು ರೌಡಿಗಳಲ್ಲ, ಕೊಲೆ ಮಾಡುವವರು ಅಲ್ಲ. ಇದರ ಬಗ್ಗೆ ಹೆಚ್ಚು ಅನುಭವ, ಚಾಕಚಕ್ಯತೆ ಮುನಿರತ್ನನಿಗೆ, ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಹನುಮಂತರಾಯಪ್ಪ. ಮುನಿರತ್ನನಿಗೆ ಸಾವಿಒನ ಬಗ್ಗೆ ಕನಸು ಬಿದ್ದಿರಬೇಕು, ಭಗವಂತ ಅವರ ಪ್ರಾರ್ಥನೆ ಈಡೇರಿಸಲಿ. ಅವನು ಮಾಡಿದ ಪಾಪಕ್ಕೆ, ಅವನು ಹೋಗಬೇಕಾಗುತ್ತದೆ. ಅವನು ನಿರ್ಮಾಪಕ, ಹೆಣ್ಣು ಮಕ್ಕಳನ್ನು ಹೇಗೆ ಬಳಸಿಕೊಳ್ಳಬೇಕು , ಯಾರನ್ನ ಯಾರ ಬಳಿ ಬಳಿಸಿ ಸಿ.ಡಿ ಮಾಡಿಸಿಕೊಳ್ಳಬೇಕು ಎಂಬುದು ಎಲ್ಲವೂ ಅವನಿಗೆ ಗೊತ್ತಿದೆ’ ಎಂದು ಮುನಿರತ್ನ ವಿರುದ್ದ ವಾಗ್ದಾಳಿ ನಡೆಸಿದರು.

 

 

 

Exit mobile version