Site icon PowerTV

ದಚ್ಚು-ಕಿಚ್ಚನ ನಡುವೆ ಕಿಚ್ಚು ಹಚ್ಚಿದ ಕೇಕ್​ !

ಬೆಂಗಳೂರು : ನಟ ಕಿಚ್ಚ ಸುದೀಪ್​ ಅಭಿನಯದ ಮ್ಯಾಕ್ಸ್​ ಚಿತ್ರ ಬಿಡುಗಡೆಗೊಂಡಿದ್ದು. ಚಿತ್ರ ವಿಮರ್ಶಕರಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಮೊದಲ ದಿನವೆ ಸುಮಾರು 8 ಕೋಟಿ ಗಳಿಕೆ ಮಾಡುವ ಮೂಲಕ ಚಿತ್ರ ದಾಖಲೆ ಮಾಡಿದೆ. ಇದರ ನಡುವೆ ಸುದೀಪ್​ ಮತ್ತು ದರ್ಶನ್​ ಫ್ಯಾನ್ಸ್​ ನಡುವೆ ಕೇಕ್​ ವಾರ್​ ಶುರುವಾಗಿದೆ.

ಪತ್ನಿ ಪ್ರಿಯಾ ಜೊತೆ ಸುದೀಪ್ ‘ಮ್ಯಾಕ್ಸ್’ ಸಕ್ಸಸ್ ಸೆಲೆಬ್ರೇಟ್ ಮಾಡಿರುವ ವೀಡಿಯೋ ವೈರಲ್ ಆಗುತ್ತಿದೆ. ಸುದೀಪ್ ಆಪ್ತ ಪ್ರದೀಪ್ ಸೇರಿದಂತೆ ಹಲವರು ಈ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಆದರೆ ಸುದೀಪ್ ಕಟ್ ಮಾಡಿದ ಕೇಕ್ ಮೇಲೆ ಬರೆದಿರುವ ಬರಹ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದೆ. ಮುಖ್ಯವಾಗಿ ದರ್ಶನ್ ಅಭಿಮಾನಿಗಳು ಈ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ. ಇದು ಸಹಜವಾಗಿಯೇ ಇಬ್ಬರು ನಟರ ಅಭಿಮಾನಿಗಳ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಮಾರುಕಟ್ಟೆಗೆ ಲಗ್ಗೆಇಟ್ಟ ನಂದಿನಿ ಇಡ್ಲಿ-ದೋಸೆ ಹಿಟ್ಟು : ಕೆಎಂಎಫ್​ನಿಂದ ಅಧಿಕೃತ ಹೇಳಿಕೆ !

ನಟ ಪ್ರದೀಪ್ “Bossism ಕಾಲ ಮುಗೀತು. Maximum Mass ಕಾಲ ಶುರುವಾಯ್ತು” ಎಂದು ಬರೆದಿರುವ ಕೇಕ್ ತಂದು ಸುದೀಪ್ ಅವರಿಂದ ಕಟ್ ಮಾಡಿಸಿದ್ದಾರೆ. ಆದರೆ ಇದು ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಪರೋಕ್ಷವಾಗಿ ನಮ್ಮ ನೆಚ್ಚಿನ ನಟ ಹಾಗೂ ಅಭಿಮಾನಿಗಳನ್ನು ಉದ್ದೇಶಿಸಿ ಇಂತಾದೊಂದು ಬರಹ ಬರೆಸಿದ್ದಾರೆ ಎಂದು ಗರಂ ಆಗಿದ್ದಾರೆ.

Exit mobile version