Site icon PowerTV

ಮಾಜಿ ಪ್ರಧಾನಿಯನ್ನು ಮದುವೆಗೆ ಆಹ್ವಾನಿಸಿದ ಡಾಲಿ ಧನಂಜಯ್​ !

ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ ಅವರು ಫೆ.16ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಹಿನ್ನೆಲೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಮದುವೆಯ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ ನೀಡಿದ್ದಾರೆ.
ಭಾವಿ ಪತ್ನಿ ಧನ್ಯತಾ ಜೊತೆ ಮಾಜಿ ಪಿಎಂ ಹೆಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ, ಮದುವೆ ಆಹ್ವಾನ ಪತ್ರಿಕೆ ನೀಡಿದ್ದಾರೆ. ಇದಕ್ಕೂ ಮೊದಲು ಸಿಎಂ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಡಿ,ಕೆ ಶಿವಕುಮಾರ್​ ಸೇರಿದಂತೆ ಅನೇಕ ಗಣ್ಯರನ್ನು ಭೇಟಿಯಾಗಿದ್ದ ಡಾಲಿ ಮದುವೆ ಪತ್ರಿಕೆ ನೀಡಿ ಆಹ್ವಾನಿಸಿದ್ದರು.
ಡಾಲಿ ಮತ್ತು ಧನ್ಯತಾ ನಡುವಿನ ಮದುವೆ ಫೆಬ್ರವರಿ. 16ರಂದು ಮೈಸೂರಿನ ಅರಮನೆ ಮೈದಾನದಲ್ಲಿ ನಡೆಯಲಿದ್ದು. ಮದುವೆ ದಕ್ಷಣ ಭಾರತದ ನಟರನ್ನು ಸೇರಿದಂತೆ ಅನೇಕ ಗಣ್ಯರು ಆಗಮಿಸುವ ಸಾಧ್ಯತೆ ಇದೆ.

 

Exit mobile version