Site icon PowerTV

ಕಂದಕಕ್ಕೆ ಸೇನಾ ವಾಹನ ಉರುಳಿ ದುರಂತ : ಉಡುಪಿಯ ಸೈನಿಕ ಅನೂಪ್​ ಪೂಜಾರಿ ಮನೆಯಲ್ಲಿ ಶೋಕ !

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಿಜಾಡಿಯ ಯೋಧ ಅನೂಪ್ ಪೂಜಾರಿ ಕಾಶ್ಮೀರದಲ್ಲಿ ಮೃತಪಟ್ಟಿದ್ದು ಕುಟುಂಬ ಕಣ್ಣೀರ ಕೋಡಿಯನ್ನು ಹರಿಸುತ್ತಿದೆ. 20 ದಿನಗಳ ರಜೆ ಮುಗಿಸಿ ಶನಿವಾರವಷ್ಟೆ ಕಾಶ್ಮೀರಕ್ಕೆ ಅನೂಪ್ ವಾಪಾಸ್ಸಾಗಿದ್ದರು.

ಮೂರು ವರ್ಷಗಳ ಹಿಂದೆ ಇವರ ಮದುವೆಯಾಗಿದ್ದು, ಅನೂಪ್ ದಂಪತಿಗೆ ಪುಟ್ಟ ಮಗು ಇದೆ. ಸುದ್ದಿ ತಿಳಿದು ಪತ್ನಿ ತವರಿನಿಂದ ಮನೆಗೆ ವಾಪಸ್ ಆಗುತ್ತಿದ್ದಾರೆ. ಅನೂಪ್ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದು, ತಾಯಿ ಇಬ್ಬರು ಸಹೋದರಿಯರು ಮತ್ತವರ ಕುಟುಂಬ ಘಟನೆಯಿಂದ ಕಣ್ಣೀರಾಗಿದೆ.

ಹವಾಲ್ದಾರ್ ಅನೂಪ್ ಪೂಜಾರಿ ಮೃತದೇಹದ ಅಂತ್ಯ ಸಂಸ್ಕಾರ ನಾಳೆ ನಡೆಯಲಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮೆರವಣಿಗೆ ಮಾಡಿ ಬಿಜಾಡಿ ಪಡು ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಮನೆಯಲ್ಲಿ ಅಂತಿಮ ವಿಧಿ ವಿಧಾನ ನಡೆಯಲಿದೆ. ಬೀಜಾಡಿ ಬೀಚ್ ಸಮೀಪ ಸರ್ಕಾರಿ ಜಾಗದಲ್ಲಿ ಅಂತ್ಯಸಂಸ್ಕಾರದ ಪ್ರಕ್ರಿಯೆಗಳು ನಡೆಯಲಿವೆ. ಈ ಬಗ್ಗೆ ಕುಟುಂಬಸ್ಥರು ಗ್ರಾಮಸ್ಥರು ಪೊಲೀಸರು ಸಭೆಗಳನ್ನು ನಡೆಸಿ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

Exit mobile version