Site icon PowerTV

ಕೋರ್ಟ್​ ಆದೇಶ ಪ್ರತಿಯನ್ನು ಪಡೆದು ಸಿ.ಟಿ ರವಿಯನ್ನು ಬಿಡುಗಡೆಗೊಳಿಸಿದ ಪೊಲೀಸರು !

ಬೆಂಗಳೂರು : ವಿಧಾನ ಪರಿಷತ್​ ಸದಸ್ಯ ಸಿ,ಟಿ ರವಿ ಅಧಿಕೃತವಾಗಿ ಪೊಲೀಸರ ಬಂಧನದಿಂದ ಬಿಡುಗಡೆಗೊಂಡಿದ್ದು. ದಾವಣಗೆರೆಯಲ್ಲಿ ಕೋರ್ಟ್​ನಿಂದ ರಿಲೀಫ್ ಕಾಪಿ ಪಡೆದ ಪೊಲೀಸರು ಸಿ.ಟಿ ರವಿಯನ್ನು ಬಂಧನದಿಂದ ಮುಕ್ತಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಲ್ಲೇಶ್ವರಂ ಬಿಜೆಪಿ ಕಛೇರಿ ಮುಂದೆ ಸಂಭ್ರಮಾಚರಣೆ !

ಸಿ.ಟಿ ರವಿಯನ್ನು ಬಂಧನದಿಂದ ಬಿಡುಗಡೆಗೊಳಿಸಬೇಕು ಎಂದು ಹೈಕೋರ್ಟ್​ ಆದೇಶಿಸಿದ ಹಿನ್ನಲೆ. ಬೆಂಗಳೂರಿನ ಬಿಜೆಪಿ ಕಚೇರಿಯ ಮುಂದೆ ಸಂಭ್ರಮಾಚರಣೆ ಮುಗಿಲು ಮುಟ್ಟಿದ್ದು. ಬಿಜೆಪಿ ಮುಖಂಡರುಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿ ಧ್ವಜ ಹಿಡಿದು ಭಾರತ್ ಮಾತಾ ಕೀ ಘೋಷಣೆ ಕೂಗುತ್ತಿರುವ ಬಿಜೆಪಿ ಕಾರ್ಯಕರ್ತರು. ಕಾಂಗ್ರೆಸ್ ಪಕ್ಷದ ವಿರುದ್ಧ ಧಿಕ್ಕಾರ ಕೂಗಿದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟಾಕಿ ಸಿಡಿಸಿ, ಸಿಹಿ ಹಂಚಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.

 

 

 

Exit mobile version