Site icon PowerTV

ಸಿ.ಟಿ ರವಿ ಓರ್ವ ಸುಸಂಸ್ಕೃತ ವ್ಯಕ್ತಿ : ಹೇಮಲತಾ ನಾಯಕ್, ಬಿಜೆಪಿ ಎಂಎಲ್​ಸಿ

ಕೊಪ್ಪಳ : ಸಿ,ಟಿ ರವಿ ಬಂಧನ ವಿಚಾರವಾಗಿ ಮಾತನಾಡಿದ ಬಿಜೆಪಿ ಎಂಎಲ್​ಸಿ ಹೇಮಲತಾ ನಾಯಕ್​ ‘ ಸಿ,ಟಿ ರವಿ ಒಬ್ಬ ಸುಸಂಕ್ಕೃತ ವ್ಯಕ್ತಿ, ಅವರು ಆ ರೀತಿಯಾಗಿ ಕೂಗಿಲ್ಲ. ಕಾಂಗ್ರೆಸ್​​ನವರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದರು.

ಕೊಪ್ಪಳ ನಗರದಲ್ಲಿ ಬಿಜೆಪಿ ಎಂಎಲ್ಸಿ ಹೇಮಲತಾ ನಾಯಕ್ ಹೇಳಿಕೆ ನೀಡಿದ್ದು. ‘ ನಾವೆಲ್ಲರು ಸಿ,ಟಿ ರವಿ ಅವರ ಬಳಿಯಲ್ಲಿದ್ದೆವು. ಆದರೆ ಅವರು ಆ ರೀತಿಯಾಗಿ ಹೇಳಿರುವುದು ನಮಗೆ ಕೇಳಿಸಿಲ್ಲ, ಆದರೆ ಅದು ಅವರಿಗೆ ಹೇಗೆ ಕೇಳಿಸಿದೆ.

ಇದನ್ನೂ ಓದಿ: ಸಿ.ಟಿ.ರವಿ ಬಂಧನಕ್ಕೆ ಖಂಡನೆ ವ್ಯಕ್ತಪಡಿಸಿದ ಉಪ ಸಭಾಪತಿ ಎಂ.ಕೆ ಪ್ರಾಣೇಶ್​

ಸಿ.ಟಿ ರವಿ ಅವರು ಆ ರೀತಿಯಾಗಿ ಕೂಗಿಲ್ಲ, ಓರ್ವ ಮಹಿಳೆಗೆ ಆ ರೀತಿಯಾಗಿ ಹೇಳಿದ್ದರೆ ಯಾವುದೇ ಮಹಿಳೆಯು ಸಹಿಸೊದಿಲ್ಲ. ಅದರೆ ಕಾಂಗ್ರೆಸ್​ನವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಸಿ,ಟಿ ರವಿ ಓರ್ವ ಸುಸಂಕ್ಕೃತ ವ್ಯಕ್ತಿಯಾಗಿದ್ದಾರೆ. ಅವರು ನಮಗೆ ಅಮ್ಮಾ, ಅಕ್ಕ ಎಂದು ಗೌರವ ಸೂಚಿಸುತ್ತಾರೆ. ಅಂತಹ ವ್ಯಕ್ತಿಯ ಮೇಲೆ ಇಂತಹ ಆರೋಪ ಮಾಡುವುದು ಸಹಿಸೋದಕ್ಕೇ ಆಗೋದಿಲ್ಲ ಎಂದು ಹೇಳಿದರು.

 

Exit mobile version