Site icon PowerTV

ಪ್ರಾಶುಂಪಾಲರ ಕೊಠಡಿ ಮುಂದೆಯೆ ಕುಸಿದು ಬಿದ್ದ ವಿಧ್ಯಾರ್ಥಿನಿ ಸಾವು !

ಶಿವಮೊಗ್ಗ: ಲೋ ಬಿ.ಪಿಯ ಪರಿಣಾಮವಾಗಿ ಕಾಲೇಜು ವಿಧ್ಯಾರ್ಥಿಯೊಬ್ಬಳು ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದ್ದು. ದ್ವಿತೀಯ ಪಿಯುಸಿ ಓದುತಿದ್ದ ಯುವತಿ ಸಾವನ್ನಪ್ಪಿದ್ದಾಳೆ ಎಂದು ಮಾಹಿತಿ ದೊರೆತಿದೆ.

ಶಿವಮೊಗ್ಗದ ನಂಜಪ್ಪ ಲೇಔಟ್ ನಲ್ಲಿರುವ ಇಂಪಿರಿಯಲ್ ಕಾಲೇಜಿನಲ್ಲಿ ಘಟನೆ ನಡೆದಿದ್ದು. ವಿಧ್ಯಾರ್ಥಿನಿಯ ಪ್ರೌಡಶಾಲೆಯ ಶಿಕ್ಷಕರು ಕಾಲೇಜಿಗೆ ಭೇಟಿ ನೀಡಿದ್ದ ವಿಶಯ ತಿಳಿದ ವಿಧ್ಯಾರ್ಥಿನಿ ತನ್ನ ಶಿಕ್ಷಕರನ್ನು ಮಾತನಾಡಿಸಲು ಕಾಲೇಜು ಪ್ರಾಂಶುಪಾಲರ ಕೊಠಡಿಗೆ ಬರುವ ವೇಳೆ ಯುವತಿ ಮೂರ್ಚೆತಪ್ಪಿ ಸಾವನ್ನಪ್ಪಿದ್ದಾಳೆ.

ಪ್ರಾಂಶುಪಾಲರ ಕೊಠಡಿಯ ಮುಂದೆಯೆ ಯುವತಿ ಮೂರ್ಚೆ ತಪ್ಪಿದ್ದು, ಯುವತಿ ಬೀಳುವ ದೃಷ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವತಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರು ಕೂಡ ಮಾರ್ಗಮಧ್ಯೆಯಲ್ಲಿಯೆ ಸಾವನ್ನಪ್ಪಿದ್ದು. ಲೋ ಬಿ.ಪಿಯ ಪರಿಣಾಮವಾಗಿ ಯುವತಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.

Exit mobile version