Site icon PowerTV

ಜಿಲ್ಲಾಸ್ಪತ್ರೆಯ ಮೇಲ್ಚಾವಣಿ ಕುಸಿತ : 2 ವರ್ಷದ ಮಗು ಸೇರಿ ಮೂವರಿಗೆ ಗಾಯ !

ದಾವಣಗೆರೆ : ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಮೇಲ್ಚಾವಣಿ ಕುಸಿದು ಮೂರು ಜನರಿಗೆ ಗಾಯವಾಗಿದೆ ಎಂದು ಮಾಹಿತಿ ದೊರೆತಿದೆ. ಸಂಪೂರ್ಣ ಆಸ್ಪತ್ರೆಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ದಾವಣಗೆರೆಯ ಜಿಲ್ಲಸ್ಪತ್ರೆಯ ಮೇಲ್ಚಾವಣಿಯ ಕಾಂಕ್ರೀಟ್​ ಪದರ ಕುಸಿದು ಬಿದ್ದು 2 ವರ್ಷದ ಮಗು ಸೇರಿ ಮೂವರಿಗೆ ಗಾಯವಾಗಿದೆ ಎಂದು ತಿಳೀದು ಬಂದಿದೆ. ವಿಜಯನಗರದ ಜಿಲ್ಲೆಯ ಹಲವಾಗಲು ಹಾಗೂ ಹಳಲು ಗ್ರಾಮದ ನಿವಾಸಿಗಳು ಗಾಯಗೊಂಡಿದ್ದಾರೆ.

ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ತಾಯಿಯ ಆರೋಗ್ಯವನ್ನು ವಿಚಾರಿಸಲು ಬಂದಿದ್ದ 46 ವರ್ಷಧ ಪ್ರೇಮಕ್ಕ ಮತ್ತು 36 ವರ್ಷದ ಕಾವೇರಿ ಹಾಗೂ 2ವರ್ಷದ ಮಗುವಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಆಸ್ಪತ್ರೆಯ ಹಿಂಬಾಗದಲ್ಲಿರುವ ತುರ್ತು ಚಿಕಿತ್ಸಾ ಘಟಕದ ಎದುರಿನ ಮುಖ್ಯ ಕಟ್ಟಡದಲ್ಲಿ ಮೇಲ್ಚಾವಣಿ ಕುಸಿದು ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಬಹುತೇಕ ಜಿಲ್ಲಾ ಆಸ್ಪತ್ರೆಯ ಕಟ್ಟಡದಲ್ಲಿ ಬಿರುಕು ಸಂಭವಿಸಿದ್ದು. ಜನರು ಆಸ್ಪತ್ರೆಗೆ ಬರಲಿ ಹಭಯ ಪಡುವಂತ ಸ್ಥಿತಿ ನಿರ್ಮಾಣವಾಗಿದೆ. ಯಾವುದಾದರೂ ಅವಘಡ ಸಂಭವಿಸಿ ಬಳಿಕ ಪರಿಹಾರ ಕೊಡುವ ಬದಲು ಬೇಗ ದುರಸ್ತಿ ಮಾಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Exit mobile version