Site icon PowerTV

ಅಪ್ಪುವಿನ 20 ವರ್ಷದ ಕನಸನ್ನು ನನಸು ಮಾಡಿದ ಅಶ್ವಿನಿ ಪುನೀತ್​ರಾಜ್​ ಕುಮಾರ್​ !

ಬೆಂಗಳೂರು : ನಗುಮುಖದ ರಾಜಕುಮಾರ್, ಎಲ್ಲರ ಪ್ರೀತಿಯ ಅಪ್ಪು ಮರೆಯಾಗಿ 2 ವರ್ಷಗಳು ತುಂಬಿದ್ದು. ಪುನೀತ್​ ಅವರು ಶಿಕ್ಷಣ ಕ್ಷೇತ್ರದ ಬಗ್ಗೆ ಕಂಡಿದ್ದ ಕನಸನ್ನು, 20 ವರ್ಷದ ನಂತರ ಅವರ ಧರ್ಮ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಈಡೇರಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಶಿಕ್ಷಣ ಕ್ಷೇತ್ರ ಪ್ರವೇಶಿಸುವುದು ನನ್ನ ಹಾಗೂ ಪುನೀತ್ ಅವರ 20 ವರ್ಷದ ಕನಸು ಈಗ ನನಸಾಗುತ್ತಿದೆ. ಬೆಂಗಳೂರಲ್ಲಿ ಟೋಸ್ ಇಂಟರ್‌ನ್ಯಾಷನಲ್ ಪ್ರೀಸ್ಕೂಲ್ ಆರಂಭಿಸುವ ತಮ್ಮ ನಿರ್ಧಾರವನ್ನು ಘೋಷಣೆ ಮಾಡಿದ್ದಾರೆ.

ಪುನೀತ್ ರಾಜ್‌ಕುಮಾರ್ ಅವರ ಕನಸಿನಂತೆ ಶಿಕ್ಷಣ ಕ್ಷೇತ್ರಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಪ್ರವೇಶ ಮಾಡಿದ್ದಾರೆ. 20 ವರ್ಷದ ನಂತರ ನನ್ನ ಹಾಗೂ ಪುನೀತ್ ಕನಸು ಈಗ ನನಸಾಗುತ್ತಿದೆ. ಜೂನಿಯರ್ ಟೋಸ್ ಪ್ರೀಸ್ಕೂಲ್ ಮುಖಾಂತರ ನಾನು ನನ್ನ ಜರ್ನಿಯನ್ನು ಪ್ರಾರಂಭಿಸುತ್ತಿದ್ದೇನೆ. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ನನ್ನ ಮೊದಲನೇ ಹೆಜ್ಜೆ ಇಡುತ್ತಿದ್ದೇನೆ. ಮಕ್ಕಳಲ್ಲಿ ಒಳ್ಳೆಯ ಕ್ಯಾರೆಕ್ಟರ್, ಲೀಡರ್ ಶಿಪ್ ಬೆಳೆಸುವುದು ನಮ್ಮ ಶಾಲೆಯ ಉದ್ದೇಶ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಣತಿ ಗಳಿಸಿದವರು ನಮ್ಮ ಜೊತೆಗೆ ಇರುತ್ತಾರೆ ಎಂದಿದ್ದಾರೆ.

Exit mobile version