Site icon PowerTV

ದೇಶಸೇವೆಯಲ್ಲಿ ನಿರತನಾಗಿದ್ದ ಬೆಳಗಾವಿ ಮೂಲದ ಸೈನಿಕ ಸಾವು !

ಬೆಳಗಾವಿ : ಲಡಾಕ್​ನಲ್ಲಿ ಗಡಿ ಕಾಯುತ್ತಿದ್ದ ಕರ್ನಾಟಕ ಮೂಲದ ಸೈನಿಕನೊಬ್ಬ ಗುಡ್ಡ ಕುಸಿದು ಸಾವಿಗೀಡಾಗಿದ್ದು. ಮೃತ ಸೈನಿಕನನ್ನು ಮಹೇಶ್​ ವಾಲಿ ಎಂದು ಗುರುತಿಸಲಾಗಿದೆ. ಇಂದು ಬೆಳಗಾವಿಯಿಲ್ಲಿ ಯೋಧನ ಅಂತ್ಯಕ್ರಿಯೆ ನಡೆದಿದೆ ಎಂದು ಮಾಹಿತಿ ದೊರೆತಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ, ಇರಣಟ್ಟಿ ಗ್ರಾಮದ ಸೈನಿಕ ಮಹೇಶ್ ವಾಲಿ ಲಡಾಖ್​​ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ದಿನಾಂಕ 14ರಂದು ಮಹೇಶ್​ ಅವರು ಕಾರ್ಯನಿರ್ವಹಿಸುತ್ತಿದ್ದ ಸ್ಥಳದಲ್ಲಿ ಗುಡ್ಡ ಕುಸಿತವಾಗಿದ್ದು. ಮಹೇಶ್​ ಅವರು ಬಂಡೆಗಳ ಮಧ್ಯೆ ಸಿಲುಕಿ ವೀರ ಮರಣ ಹೊಂದಿದ್ದಾರೆ.

ಗುಡ್ಡ ತೆರವು ಕಾರ್ಯಚರಣೆಯ ಬಳಿಕ ಸೈನಿಕನ ಮೃತದೇಹವನ್ನು ಹೊರಗೆ ತೆಗೆದಿದ್ದು. ಸಕಲ ಸರ್ಕಾರಿ ಗೌರವಗಳೊಂದಿಗೆ ಸೈನಿಕನ ಮೃತದೇಹವನ್ನು ಹುಟ್ಟೂರಿಗೆ ಕಳಿಸಿಕೊಟ್ಟಿದ್ದಾರೆ. ಬೆಳಗಾವಿ ಸಾಂಬ್ರಾ ಏರ್ಪೋಟ್​ನಲ್ಲಿ  ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​ ಗೌರವ ಸಲ್ಲಿಸಿದ್ದು. ಸೈನಿಕನ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ತಿಳಿದು ಬಂದಿದೆ.

ಮೃತ ಸೈನಿಕನಿಗೆ ಎರಡು ತಿಂಗಳ ಹಿಂದಷ್ಟೆ ನಿಶ್ಚಿತಾರ್ಥವಾಗಿತ್ತು ಮತ್ತು ಕೆಲವೆ ದಿನಗಳಲ್ಲಿ ಮದುವೆಯು ಕೂಡ ನಿಶ್ಚಯವಾಗಿತ್ತು ಎಂದು ತಿಳಿದು ಬಂದಿದೆ.

Exit mobile version