Site icon PowerTV

ಪಂಚಭೂತದಲ್ಲಿ ಲೀನರಾದ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ !

ಕಾರವಾರ : ವೃಕ್ಷಮಾತೆ ಎಂದೇ ಪ್ರಸಿದ್ದಿಯಾಗಿದ್ದ ತುಳಸಿ ಗೌಡರ ಅಂತ್ಯ ಸಂಸ್ಕಾರ ಇಂದು ಅವರ ಸ್ವಗ್ರಾಮವಾದ ಹೊನ್ನಳ್ಳಿಯಲ್ಲಿ ನೆರೆವೇರಿದ್ದು. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯ ಸಂಸ್ಕಾರ ನೆರವೇರಿದೆ ಎಂದು ತಿಳಿದು ಬಂದಿದೆ.

ನಿನ್ನೆ ಸಂಜೆ ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ತುಳಸಿಗೌಡರು ಮೃತರಾಗಿದ್ದರು. ಅವರ ನಿಧನಕ್ಕೆ ಪ್ರದಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಜಿಲ್ಲಾಡಳಿತದಿಂದ ಅವರ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ತುಳಸಿಗೌಡರ ಚಿತೆಗೆ ಅವರ ಪುತ್ರ ಸುಬ್ರಾಯ್​ ಗೌಡ ಅಗ್ನಿಸ್ಪರ್ಷ ಮಾಡಿದ್ದು. ತುಳಸಿ ಗೌಡರ ಅಂತ್ಯ ಸಂಸ್ಕಾರಕ್ಕೆ  ಕಾರವಾರ ಸತೀಶ್​ ಸೈಲ್​, ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಭಾಗಿಯಾಗಿದ್ದರು ಎಂದು ಮಾಹಿತಿ ದೊರೆತಿದೆ.

Exit mobile version