Wednesday, August 27, 2025
HomeUncategorizedಕೆಟ್ಟದ್ದು ಬರೋದೆ ಒಳ್ಳೆ ದಾರಿಲೀ ನಡೆಸೋಕೆ, ದರ್ಶನ್​ರನ್ನು ಭೇಟಿ ಮಾಡುತ್ತೇನೆ : ಶ್ರೀ ಮುರಳಿ

ಕೆಟ್ಟದ್ದು ಬರೋದೆ ಒಳ್ಳೆ ದಾರಿಲೀ ನಡೆಸೋಕೆ, ದರ್ಶನ್​ರನ್ನು ಭೇಟಿ ಮಾಡುತ್ತೇನೆ : ಶ್ರೀ ಮುರಳಿ

ಮೈಸೂರು: ಇಂದು ನಟ ಶ್ರೀಮುರಳಿ ಹುಟ್ಟುಹಬ್ಬ ಹಿನ್ನಲೆ. ಮೈಸೂರಿನಲ್ಲಿ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಶ್ರೀ ಮುರಳಿ ಕೇಕ್​ ಕಟ್​​ ಮಾಡುವ ಮೂಲಕ ಅಭಿಮಾನಿಗಳೊಂದಿಗೆ  ಸಂಭ್ರರಮಾಚರಣೆಯಲ್ಲಿ ತೊಡಗಿಕೊಂಡರು.

ದರ್ಶನ್​ ಬಗ್ಗೆ ಶ್ರೀ ಮುರಳಿ ಮಾತು !

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಶ್ರೀ ಮುರಳಿಯವರು ದರ್ಶನ್​ಗೆ ಜಾಮೀನು ಸಿಕ್ಕ ವಿಚಾರವಾಗಿ ಮಾತನಾಡಿ ‘ ಕಾಲಯ ತಸ್ಮೈ ನಮಃ ಎಂದು ನಾನು ಈ ಹಿಂದೆಯೂ ಹೇಳಿದ್ದೆ, ಅದನ್ನೆ ಈಗಲೂ ಹೇಳುತ್ತೇನೆ. ಕೆಟ್ಟದೂ ಬರೋದೆ ಒಳ್ಳೆ ದಾರೀಯಲ್ಲಿ ನಡೆಸೋಕೆ.

ದರ್ಶನ್​ ಅವರು ಈಗ ಆಸ್ಪತ್ರೆಯಲ್ಲಿದ್ದಾರೆ, ಅವರು ಆಸ್ಪತ್ರೆಯಿಂದ ಮನೆಗೆ ಮರಳಿದ ನಂತರ ಅವರನ್ನು ಭೇಟಿ ಮಾಡಿ ಮಾತನಾಡುತ್ತೆನೆ ಎಂದು ನಟ ಶ್ರೀ ಮುರಳಿ ಮೈಸೂರಿನಲ್ಲಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments