Site icon PowerTV

ಸಲೂನ್​ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದವರ ಹೆಡೆಮುರಿ ಕಟ್ಟಿದ ಪೊಲೀಸರು !

ಮೈಸೂರು: ಸಲೂನ್​ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿದ್ದು. ಸುಮಾರು 5 ಜನ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ ಎಂದು ಮಾಹಿತಿ ತಿಳಿದಿದೆ.

ಮೈಸೂರಿನ ಮೆಟ್ಟಗಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಯುನಿಕ್ ಎಂಬ ಹೆಸರಿನ ಸ್ಪಾ ಅಂಡ್ ಸಲೂನ್‌ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದು. ಒಬ್ಬ ಗ್ರಾಹಕ ಸೇರಿದಂತೆ 5 ಜನ ಸಂತ್ರಸ್ತ ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸಹಾಯಕ ಪೊಲೀಸ್​ ಆಯುಕ್ತರಾದ ಗಜೇಂದ್ರ ಪ್ರಸಾಧ್​​ ಅವರಿಗೆ ಒಡನಾಡಿ ಸಂಸ್ಥೆ ಮಾಹಿತಿ ನೀಡಿತ್ತು. ಖಚಿತ ಮಾಹಿತಿ  ಮೇರೆಗೆ ಗಜೇಂದ್ರ ಪ್ರಸಾದ ತಂಡವನ್ನು ರಚಿಸಿದ್ದರು. ಈ ತಂಡದಲ್ಲಿ ಹೆಬ್ಬಾಳ ಪೋಲಿಸ್ ಠಾಣೆಯಿಂದ ಸಬ್ ಇನ್ಸ್ಪೆಕ್ಟರ್ ಪ್ರವೀಣ್, ಸರಸ್ವತಿಪುರಂ ಪೋಲಿಸ್ ಠಾಣೆಯಿಂದ ಸಬ್ ಇನ್ಸ್ಪೆಕ್ಟರ್ ಲತಾ, ಮೆಟಗಳ್ಳಿ ಪೋಲಿಸ್ ಠಾಣೆಯಿಂದ ಜೋಸನ್ ಮತ್ತು ಇನ್ಸ್ಪೆಕ್ಟರ್ ದಿವಾಕರ್ ಒಳಗೊಂಡ ತಂಡ ಮಸಾಜ್​ ಪಾರ್ಲರ್​ ಮೇಲೆ ದಾಳಿ ನಡೆಸಿದ್ದಾರೆ.

ಈ ವೇಳೆ 5 ಜನ ಮಹಿಳೆಯರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು. ದಂಧೆ ನಡೆಸುತ್ತಿದ್ದ ಮಹಿಳೆ ಮತ್ತು ಒಬ್ಬ ಗ್ರಾಹಕನನ್ನು ಸೆರೆ ಹಿಡಿಯಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸರು ಮಾನವ ಕಳ್ಳ ಸಾಗಾಣಿಕೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Exit mobile version