Site icon PowerTV

ಜೋಗ ಜಲಪಾತ ಪ್ರವೇಶಕ್ಕೆ 3 ತಿಂಗಳು ನಿರ್ಬಂಧ : ಕಾರಣವೇನು ಗೊತ್ತಾ!

ಶಿವಮೊಗ್ಗ: ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಜನವರಿ 1ರಿಂದ ಸುಮಾರು 3 ತಿಂಗಳ ಕಾಲ ಬಂದ್​ ಆಗಲಿದೆ ಎಂದು ತಿಳಿದು ಬಂದಿದ್ದು. ಮೂಲ ಸೌಕರ್ಯಗಳನ್ನು ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಕಾಮಗಾರಿಗಳು ನಡೆಯುವುದರಿಂದ ಜಲಪಾತ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಿಲಾಗಿದೆ ಎಂದು ತಿಳಿದು ಬಂದಿದೆ.

ಶಿವಮೊಗ್ಗದ ಸಾಗರದಲ್ಲಿರುವ ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ದೇಶಾದ್ಯಂತ ಪ್ರವಾಸಿಗರ ದಂಡು ಹರಿದು ಬರುತ್ತದೆ. ಮುಂಗಾರು ಮಳೆ ಬೀಳುವ ಅವಧಿಯಲ್ಲಂತೂ ಇಲ್ಲಿನ ಸೌಂಧರ್ಯವನ್ನು ವರ್ಣಿಸಲು ಪದಗಳೇ ಸಾಲುದು ಎಂಬತ್ತಿರುತ್ತದೆ. ಆದರೆ ಜನವರಿ 1ನೇ ತಾರೀಕಿನಿಂದ ಜೋಗ ಜಲಪಾತಕ್ಕೆ ಪ್ರವಾಸಿಗರನ್ನು ನಿರ್ಭಂದಿಸಿದ್ದು. ಮಾರ್ಚ್​ 15ರವರೆಗೆ ಈ ನಿರ್ಬಂಧ ಇರುತ್ತದೆ ಎಂದು ತಿಳಿದು ಬಂದಿದೆ.

ಜೋಗ ಜಲಪಾತದ ಮುಖ್ಯದ್ವಾರ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಹಾಗೂ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ್ದು. ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್​ ಹೆಗಡೆ ಆದೇಶ ಹೊರಡಿಸಿದ್ದಾರೆ ಮತ್ತು ಪ್ರವಾಸಿಗರು ಸಹಕರಿಸುವಂತೆ ಕೋರಿದ್ದಾರೆ.

Exit mobile version