Site icon PowerTV

ಹೆಂಡತಿ ಕಾಟಕ್ಕೆ ಬೇಸತ್ತು ಪೊಲೀಸ್ ಕಾನ್ಸಟೇಬಲ್ ಆತ್ಮಹ*ತ್ಯೆ !

ಬೆಂಗಳೂರು: ಹೆಂಡತಿ ಕಾಟಕ್ಕೆ ಬೇಸತ್ತ ಪೊಲೀಸ್​ ಪೇದೆಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು. ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಸದ್ಯ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್​ ಕಾನ್ಸಟೇಬಲ್​ ತಿಪ್ಪಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದು. ಹೆಂಡತಿ ಮತ್ತು ಮಾವ ಕಿರುಕುಳ ನೀಡಿದ್ದಾರೆ ಎಂದು ಡೆತ್​ನೋಟ್​ನಲ್ಲಿ ಬರೆದಿಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ಮಾವ ಯಮುನಪ್ಪ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.

ರೈಲಿಗೆ ತಲೆಕೊಟ್ಟು ಹೆಡ್ ​ಕಾನ್ಸಟೇಬಲ್​ ತಿಪ್ಪಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದು. ತಿಪ್ಪಣ್ಣನ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಬೈಯಪ್ಪನಹಳ್ಳಿ ರೈಲ್ವೇ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮತ್ತೊಬ್ಬ ಮಹಿಳೆಯ ಸಹವಾಸಕ್ಕೆ ಬಿದ್ದಿದ್ದ ತಿಪ್ಪಣ್ಣ !

ಪೊಲೀಸ್​ ಕಾನ್ಸಟೇಬಲ್​​ ತಿಪ್ಪಣ್ಣ ಮದುವೆಯಾಗಿದ್ದರು ಕೂಡ ಮತ್ತೊಬ್ಬ ಯುವತಿಯ ಸಹವಾಸಕ್ಕೆ ಬಿದ್ದಿದ್ದನು. ಈ ವಿಷಯ ತಿಳಿದ ತಿಪ್ಪಣ್ಣನ ಹೆಂಡತಿ ನಿರಂತರವಾಗಿ ಗಂಡನೊಂದಿಗೆ ಜಗಳವಾಡುತ್ತಿದಳು. ಇದರ ಕುರಿತು ಹೆಂಡತಿಯ ಕುಟುಂಬಸ್ಥರು ಕೂಡ ರಾಜಿ ಸಂಧಾನ ಮಾಡಿಸುವ ಪ್ರಯತ್ನ ಮಾಡಿದ್ದರು.

ಆದರೆ ಇಷ್ಟಾದರು ಕೂಡ ಬುದ್ದಿ ಕಲಿಯದ ತಿಪ್ಪಣ್ಣ ಹೆಂಡತಿ ಮನೆಗೆ ಬರದೆ, ಪ್ರಿಯತಮೆ ಮನೆಯಲ್ಲೆ ವಾಸ್ತವ್ಯ ಹೂಡಿದ್ದನು. ಇದರ ಕುರಿತು ಆತನ ಮಾವ ಕೂಡ ಹಲವು ಬಾರಿ ಕರೆದು ಬುದ್ದಿಹೇಳಿದ್ದರು. ಹೆಂಡತಿ ಮತ್ತು ಗಂಡನ ನಡುವೆ ದಿನನಿತ್ಯ ಜಗಳವು ನಡೆಯುತ್ತಿತ್ತು. ಇವೆಲ್ಲೆದರಿಂದ ಮನನೊಂದಿದ್ದ ತಿಪ್ಪಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಾಹಿತಿ ದೊರೆತಿದೆ.

Exit mobile version