Site icon PowerTV

ಪೊಲೀಸರ ಮೇಲಿನ ಸಿಟ್ಟಿಗೆ ಕೊಲೆ ಆರೋಪಿಗಳಿಗೆ ಜಾಮೀನು ನೀಡಿದ ನ್ಯಾಯಾಧೀಶರು !

ರಾಮನಗರ : ಪೊಲೀಸರ ಮೇಲಿನ ಸಿಟ್ಟಿಗೆ ಕೊಲೆ ಆರೋಪಿಗಳನ್ನೆ ನ್ಯಾಯಾಧೀಶರು ಬಿಟ್ಟು ಕಳುಹಿಸಿರುವ ಘಟನೆ ರಾಮನಗರದಲ್ಲಿ ನಡೆದಿದ್ದು. ಜಾಮೀನಿಗೆ ಅರ್ಜಿ ಸಲ್ಲಿಸದೆ ಇದ್ದರು ಕೂಡ ನ್ಯಾಯಾಲಯ ಆರೋಪಿಗಳನ್ನು ಬಿಟ್ಟು ಕಳುಹಿಸಿರುವುದು ದೇಶದೆಲ್ಲಡೆ ಚರ್ಚೆಗೆ ಗ್ರಾಸವಾಗಿದೆ.

ದೇಶದಲ್ಲಿ ಜನರು ಶಾಸಕಾಂಗ, ಕಾರ್ಯಾಂಗವನ್ನು ನಂಬದಿದ್ದರು ಕೂಡ, ನ್ಯಾಯಾಂಗದ ಮೇಲೆ ನಂಬಿಕೆ ಇಟ್ಟಿದ್ದಾರೆ. ಆದರೆ, ರಾಮನಗರದ ನ್ಯಾಯಾಧೀಶರ ಅಪರೂಪದ ಆದೇಶ ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಹೌದು, ಕಳೆದ ನವೆಂಬರ್​ 26ರಂದು ರಾಮನಗರದ ಹೊರವಲಯದಲ್ಲಿ ಕೊಲೆಯೊಂದು ನಡೆದಿತ್ತು. 21 ವರ್ಷದ ಪುನೀತ್​ ಎಂದ ಯುವಕ ಕೊಲೆಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಸಿದಂತೆ ರಾಮನಗರ ಗ್ರಾಮಾಂತರ ಪೊಲೀಸರು ಚಂದ್ರು, ಮುರುಳಿ, ನಾಗೇಶ್ ಎಂಬ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದರು.

ಆದರೆ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ವಶಕ್ಕೆ ಪಡೆಯಲು ರಿಮ್ಯಾಂಡ್​ ಅರ್ಜಿ ಸಲ್ಲಿಸಿಲು ವಿಳಂಭ ಮಾಡಿದ್ದರು. ಅಲ್ಲದೆ, ನ್ಯಾಯಾಲಯದ ಕಲಾಪಕ್ಕೆ ಪಬ್ಲಿಕ್ ಪ್ರಾಸಿಕ್ಯೂಟರ್ ಹಾಜರಾಗದ ಹಿನ್ನಲೆ ಸಿಟ್ಟಿಗೆದ್ದ ನ್ಯಾಯಾಧೀಶರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಕಳೆದ ಡಿ.06ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು. ರಾಮನಗರದ 1ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಗುಲ್ಜಾರ್ ಲಾಲ್ ಡಿ. ಮಹಾವರ್ಕರ್​ರ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.

Exit mobile version