Site icon PowerTV

ಜಾತಿ ಸಂಘರ್ಷ : 11 ವರ್ಷದ ಬಳಿಕ ಮಾರಮ್ಮನ ದೇವಾಸ್ಥಾನ ಓಪನ್​ !

ಮೈಸೂರು: ಜಿಲ್ಲೆಯ ಜಯಪುರ ಗ್ರಾಮದಲ್ಲಿ ಕಳೆದ 11 ವರ್ಷಗಳ ಹಿಂದೆ ದಲಿತರನ್ನು ದೇವಾಲಯಕ್ಕೆ ನಿರ್ಬಂದ ಹೇರಿದ್ದ ಹಿನ್ನಲೆಯಲ್ಲಿ ಬೀಗ ಹಾಕಿದ್ದ ಮಾರಮ್ಮನ ದೇವಾಲಯವನ್ನು ಇಂದು ತೆರೆದಿದ್ದು. 11 ವರ್ಷಗಳ ಸಂಘರ್ಷ ಸುಖಾಂತ್ಯಾವಾಗಿದೆ ಎಂದು ಮಾಹಿತಿ ದೊರೆತಿದೆ.

11 ವರ್ಷಗಳ ಹಿಂದೆ ದಲಿತರ ಪ್ರವೇಶಕ್ಕೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಭಾರೀ ವಿವಾದ ಉಂಟಾಗಿ ಮಾರಮ್ಮನ ದೇವಾಲಯದ ಬಾಗಿಲಿಗೆ ಬೀಗ ಹಾಕಲಾಗಿತ್ತು. ಇದರ ಕುರಿತಾಗಿ ತಹಸೀಲ್ದಾರ್ ಮಹೇಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಶಾಂತಿಸಭೆ ಯಶಸ್ವಿಯಾಗಿ ದೇವಸ್ಥಾನದ ಬಾಗಿಲು ತೆರೆಯಲಾಯಿತು.

ಗ್ರಾಮದಲ್ಲಿ 11 ವರ್ಷಗಳ ನಂತರ ಸಂತಸ ಮನೆ ಮಾಡಿದೆ. ಎಲ್ಲಾ ಕೋಮಿನ 5 ಮುಖಂಡರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಸುಧೀರ್ಘ ಚರ್ಚೆ ನಂತರ ಮಾರಮ್ಮ ದೇವಾಲಯದ ಬಾಗಿಲನ್ನು ಮತ್ತೆ ತೆರೆಯುವ ನಿರ್ಧಾರಕ್ಕೆ ಬರಲಾಯಿತು. ದೇವತೆಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ವಿವಾದಕ್ಕೆ ಅಂತ್ಯ ಹಾಡಲಾಗಿದೆ.

Exit mobile version