Site icon PowerTV

ಅತುಲ್ ಸಾವಿಗೆ ಹೆಚ್ಚಿದ ನ್ಯಾಯದ ಕೂಗು : ಅಸ್ಥಿ ವಿಸರ್ಜಿಸದಿರಲು ನಿರ್ಧರಿಸಿದ ಕುಟುಂಬಸ್ಥರು

ಬೆಂಗಳೂರು : ಆತುಲ್​ ಆತ್ಮಹತ್ಯೆ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ನ್ಯಾಯದ ಕೂಗು ಹೆಚ್ಚಾಗುತ್ತಿದ್ದು. ನ್ಯಾಯ ಸಿಗುವವರೆಗೂ ಅತುಲ್​ ಚಿತಾಬಸ್ಮವನ್ನು ವಿಸರ್ಜಿಸದಿರಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

ಇತ್ತೀಚೆಗೆ ಮಾರತ್ತಹಳ್ಳಿಯಲ್ಲಿ ಟೆಕ್ಕಿ ಅತುಲ್​ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೆಂಡತಿ ಮತ್ತು ಹೆಂಡತಿಯ ಕುಟುಂಬಸ್ಥರು ನೀಡುತ್ತಿದ್ದ ಕಿರುಕುಳವನ್ನು ಸಹಿಸಲು ಸಾಧ್ಯಾವಾಗದೆ ಇಂತಹ ನಿರ್ಧಾರಕ್ಕೆ ಬಂದಿದ್ದರು. ಸಾಯುವ ಮುನ್ನ 24 ಪುಟಗಳ ಡೆತ್​ ನೋಟ್​ ಬರೆದಿಟ್ಟಿದ್ದ ಅತುಲ್​, ಸುಮಾರು 90 ನಿಮಿಷಗಳ ವಿಡಿಯೋವನ್ನು ಮಾಡಿಟ್ಟಿದ್ದನು. ಹಾಗೂ ಇವುಗಳಲ್ಲಿ ಹೆಂಡತಿಯಿಂದ ಮತ್ತು ನ್ಯಾಯಾಲಯದಿಂದ ಆಗುತ್ತಿರುವ ದೌರ್ಜನ್ಯದ ಕುರಿತು ವಿವರಿಸಿದ್ದರು.

ಆತುಲ್​ ಆತ್ಮಹತ್ಯೆ ವಿಷಯ ಹೊರಬರುತಿದ್ದಂತೆ ದೇಶದೆಲ್ಲೆಡೆ ಅತುಲ್​ಗೆ ನ್ಯಾಯ ಸಿಗಬೇಕು ಎಂಬ ಕೂಗು ಎಚ್ಚಾಗುತ್ತಿದ್ದು. ಸಾಮಾಜಿಕ ಕಾಲತಾಣದಲ್ಲಿ ಜಸ್ಟೀಸ್​ ಫಾರ್​ ಅತುಲ್​ ಸುಭಾಷ್​ ಎಂಬ ಅಭಿಯಾನ ಆರಂಭವಾಗಿದೆ. ಇದರ ಹಿನ್ನಲೆಯಲ್ಲೆ ಇಂದು ಅತುಲ್​ ಪಾರ್ಥಿವಕ್ಕೆ ಪಣತ್ತೂರಿನಲ್ಲಿ ಅಂತ್ಯಸಂಸ್ಕಾರವಾಗಿದ್ದು. ಅತುಲ್​ ಆಸೆಯಂತೆ ಆತನ ಚಿತಾಭಸ್ಮವನ್ನು ವಿಸರ್ಜನೆ ಮಾಡದಿರಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಾಯುವ ಮುನ್ನ ವಿಡಿಯೋ ಮಾಡಿದ್ದ ಅತುಲ್​ ಆ ವಿಡಿಯೋದಲ್ಲಿ ‘ನನ್ನ ಚಿತಾಬಸ್ಮವನ್ನು ಹೆಂಡತಿ ಮತ್ತು ಆಕೆಯ ಕುಟುಂಬದವರಿಗೆ ನ್ಯಾಯ ಸಿಗುವವರೆಗೂ ನನ್ನ ಅಸ್ಥಿಯನ್ನು ವಿಸರ್ಜಿಸಬೇಡಿ ಎಂದು ಹೇಳಿದ್ದರು. ಹಾಗೂ ಒಂದು ವೇಳೆ ಪ್ರಕರಣದಲ್ಲಿ ಹೆಂಡತಿ ಮತ್ತು ಆಕೆಯ ಕುಟುಂಬಸ್ಥರಿಗೆ ಶಿಕ್ಷೆಯಾಗದಿದ್ದರೆ ನನ್ನ ಅಸ್ಥಿಯನ್ನು ಕೋರ್ಟ್ ಮುಂದಿರುವ ನ್ಯಾಯಾಲಯದಲ್ಲಿ ಬಿಸಾಡಿ ಬಿಡಿ ಎಂದು ಹೇಳಿದ್ದರು. ಹೀಗಾಗಿ ಅತುಲ್​ ಸುಭಾಷ್​ ಕುಟುಂಬಸ್ಥರು ಆತನ ಅಸ್ಥಿಯನ್ನು ವಿಸರ್ಜಿಸದಿರಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

 

 

Exit mobile version