Site icon PowerTV

ಟೆಕ್ಕಿ ಅತುಲ್ ಸುಭಾಷ್​​ ಆತ್ಮಹತ್ಯೆ: ಪತ್ನಿಯ ಮನೆಗೆ ಸಮನ್ಸ್ ಅಂಟಿಸಿದ ಬೆಂಗಳೂರು ಪೊಲೀಸರು !

ಉತ್ತರ ಪ್ರದೇಶ: ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿರುವ ಅವರ ಪತ್ನಿ ನಿಖಿತಾ ಸಿಂಘಾನಿಯಾಗೆ ಸಮನ್ಸ್‌ ಜಾರಿ ಮಾಡಿರುವ ಬೆಂಗಳೂರು ಪೊಲೀಸರು, ಮೂರು ದಿನಗಳೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಬೆಳಿಗ್ಗೆ 11ರ ಸುಮಾರಿಗೆ ಉತ್ತರ ಪ್ರದೇಶದ ಜೋನಪುರದ ಖೋವಾ ಮಂಡಿ ಪ್ರದೇಶದಲ್ಲಿರುವ ನಿಖಿತಾ ನಿವಾಸದ ಬಳಿಗೆ ಆಗಮಿಸಿದ ಇನ್ಸ್‌ಪೆಕ್ಟರ್ ಸಂಜೀತ್ ಕುಮಾರ್ ನೇತೃತ್ವದ 4 ಸದಸ್ಯರ ಬೆಂಗಳೂರು ಪೊಲೀಸರ ತಂಡ ನಿಖಿತಾ ನಿವಾಸಕ್ಕೆ ಸಮನ್ಸ್‌ ಅಂಟಿಸಿದೆ. ‘ಆಕೆಯ ಪತಿ ಟಿಕಿ ಅತುಲ್ ಆತ್ಮಹತ್ಯೆಯ ಸಾಂದರ್ಭಿಕ ಸಾಕ್ಷಾಧಾರಗಳ ಹಿನ್ನೆಲೆ ನಿಖಿತಾ ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸ್ ಠಾಣೆಯ ತನಿಖಾಧಿಕಾರಿ ಮುಂದೆ ಮೂರು ದಿನಗಳ ಒಳಗೆ ವಿಚಾರಣೆಗೆ ಹಾಜರಾಗಬೇಕು’ಎಂದು ಸರ್ಕಲ್‌ ಇನ್ಸ್‌ಪೆಕ್ಟರ್ ಆಯುಶ್ ಶ್ರೀವಾಸ್ತವ ತಿಳಿಸಿದ್ದಾರೆ.

ಎಫ್‌ಐಆರ್‌ನಲ್ಲಿ ನಿಖಿತಾ ಕುಟುಂಬ ಸದಸ್ಯರಾದ ತಾಯಿ ನಿಶಾ ನಿಂಘಾನಿಯಾ, ಚಿಕ್ಕಪ್ಪ ಸುಶಿಲ್ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಹೆಸರುಗಳಿದ್ದರೂ ನಿಕಿತಾಗೆ ಮಾತ್ರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ನೀಡಲಾಗಿದೆ. ಸಮನ್ಸ್‌ನಲ್ಲಿ ಮನೆಯ ಇತರೆ ಸದಸ್ಯರ ಹೆಸರುಗಳಿಲ್ಲ. ಸಮನ್ಸ್‌ ಮನೆಯ ಗೋಡೆಗೆ ಅಂಟಿಸುವ ವೇಳೆ ಮನೆಯಲ್ಲಿ ಯಾವೊಬ್ಬ ಸದಸ್ಯರೂ ಇರಲಿಲ್ಲ ಎಂದು ವರದಿ ತಿಳಿಸಿದೆ.

ಗುರುವಾರ ತಡರಾತ್ರಿ ಜೋನಪುರಕ್ಕೆ ಆಗಮಿಸಿದ ಬೆಂಗಳೂರು ಪೊಲೀಸರ ತಂಡ ಎಸ್‌ಪಿ ಅಜಯ್ ಪಾಲ್ ಶರ್ಮಾ ಅವರ ಜೊತೆ ಮಾತುಕತೆ ನಡೆಸಿ ಬಳಿಕ ಮನೆಗೆ ಸಮನ್ಸ್‌ ಅಂಟಿಸಿದ್ದಾರೆ. ನಿಖಿತಾ ವಿರುದ್ಧ ಈ ಹಿಂದೆ ಯಾವುದಾದರೂ ಪ್ರಕರಣ ದಾಖಲಾಗಿಯೇ ಎಂಬ ಮಾಹಿತಿ ಕಲೆಹಾಕಲು ಪೊಲೀಸರು ಸಿಟಿ ಸಿವಿಲ್ ನ್ಯಾಯಾಯಕ್ಕೆ ಹೋಗುವ ಯೋಜನೆಯಲ್ಲಿದ್ದಾರೆ. 34 ವರ್ಷದ ಟೆಕ್ಕಿ ಅತುಲ್ ಸುಭಾಷ್ ಡಿಸೆಂಬರ್ 9ರಂದು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಾಜಿ ಪತ್ನಿ ಮತ್ತು ಅವರ ಕುಟುಂಬದ ಕಿರುಕುಳದಿಂದ ಬೇಸತ್ತು ಅತುಲ್ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿತ್ತು.

Exit mobile version