Site icon PowerTV

25 ವರ್ಷಗಳಿಂದ ಬಸ್​​ ಸೌಕರ್ಯವಿಲ್ಲದೆ ಪರದಾಟ : ಪವರ್ tv​ ವರದಿಗೆ ಎಚ್ಚೆತ್ತ ಸಾರಿಗೆ ಅಧಿಕಾರಿಗಳು!

ವಿಜಯಪುರ : ಜಿಲ್ಲೆಯ ತಾಳಿಕೋಟಿ ತಾಲೂಕಿನ ಹರನಾಳ ಗ್ರಾಮಕ್ಕೆ ಕಳೆದ 25 ವರ್ಷಗಳಿಂದ ಬಸ್ ಸೌಕರ್ಯವಿಲ್ಲ. ಈ ವಿಚಾರವಾಗಿ ಆ ಗ್ರಾಮದ ಜನರು ಹಲವು ಬಾರಿ ಸಂಬಂಧ ಪಟ್ಟ ಅಧಿಕಾರಿಗಳು, ಜನ ಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ ಆದರೆ ಯಾವುದೇ ಪ್ರಯೋಜನೆವಾಗಿರಲಿಲ್ಲ.

ಇನ್ನೂ ಹರನಾಳ ಗ್ರಾಮದಲ್ಲಿ ಸುಮಾರು 1200 ಜನರಿದ್ದಾರೆ. ಈ ಗ್ರಾಮದಲ್ಲಿ ಕೇವಲ 7ನೇ ತರಗತಿ ವರೆಗೆ ಮಾತ್ರ ಶಾಲೆ ಇದೆ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಶಾಲಾ ಕಾಲೇಜಿನ ಮಕ್ಕಳು ತಾಳಿಕೋಟಿ ಪಟ್ಟಣಕ್ಕೆ ಸುಮಾರು‌ 5 ಕಿಲೋ ಮೀಟರ್ ವರೆಗೆ ನಡೆದುಕೊಂಡು ತಾಳಿಕೋಟಿಗೆ ಹೋಗಬೇಕು, ಕಾರಣ ಈ ಗ್ರಾಮಕ್ಕೆ ಬಸ್ ಸೌಕರ್ಯ ಇಲ್ಲ. ಇನ್ನೂ ಈ ಗ್ರಾಮದ ಜನರು ತಮಗೆ ಏನಾದರೂ ದಿನ ಬಳಕೆ ವಸ್ತುಗಳು ಬೇಕು ಎಂದರೂ ತಾಳಿಕೋಟಿಗೆ ಹೋಗಿ ತರಬೇಕು, ಇನ್ನೂ ಆಸ್ಪತ್ರೆಗೆ ಸಹಿತ ಈ ಗ್ರಾಮಸ್ಥರು ತಾಳಿಕೋಟಿ ಪಟ್ಟಣಕ್ಕೆ ಹೋಗಬೇಕು. ಹೀಗಾಗಿ ಈ ವಿಚಾರವಾಗಿ ಈ ಗ್ರಾಮದ ಜನರು, ವಿದ್ಯಾರ್ಥಿಗಳು ಹಲವು ಬಾರಿ ಸಂಬಂಧಪಟ್ಟ ಜನ ಪ್ರತಿನಿಧಿಗಳಿಗೆ ಹಾಗೂ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ.

ಇನ್ನೂ ಹರನಾಳ ಗ್ರಾಮದ ಅಕ್ಕಪಕ್ಕದ ಗ್ರಾಮಕ್ಕೆ ಬರುವ ಬಸ್ ಈ ಊರಿಗೆ ಬರಲ್ಲ. ಪಕ್ಕದ ಗ್ರಾಮ ನಾಗೂರ, ಮಸ್ಕೇನಾಳ, ಶಿವಪುರ, ಹಡಗಿನಾಳ, ಕಲ್ಲದೇವನಹಳ್ಳಿ ಮೂಕಿಹಾಳ ಗ್ರಾಮದ ವರೆಗೂ ಬಸ್ ಬರುತ್ತದೆ ಆದರೆ ಹರನಾಳ ಗ್ರಾಮಕ್ಕೆ ಬರಲ್ಲ. ಬಂದ ಬಸ್ ತಿರುಗಿಸಲು‌ ಜಾಗ ಇಲ್ಲ‌ ಎಂಬ ಕಾರಣಕ್ಕೆ ಒಂದು ವಾರಗಳ ಕಾಲ ಓಡಿಸಿ ಏಕಾ ಏಕಿಯಾಗಿ ನಿಲ್ಲಿಸಿದ್ದಾರೆ. ಬಳಿಕ ಗ್ರಾಮಸ್ಥರು ಬಸ್ ಬಿಡುವಂತೆ ಹಲವು ಬಾರಿ ಮನವಿ ಮಾಡಿದರೂ‌ ಪ್ರಯೋಜವಾಗಿರಲಿಲ್ಲ. ಯಾವಾಗ ಈ ವಿಚಾರವಾಗಿ ಪವರ ಟಿವಿ ವಿಸ್ತೃತವಾದ ವರದಿ ಇಂದು ಬೆಳಿಗ್ಗೆ ಬಿತ್ತರ ಮಾಡಿತೋ ಎಚ್ಚೆತ್ತುಕೊಂಡ ಅಧಿಕಾರಿಗಳು ಬಸ್ ಬಿಡಿಸುವ ಭರವಸೆ ನೀಡಿದ್ದಾರೆ…

ಕಳೆದ 25 ವರ್ಷಗಳಿಂದ ಬಸ್ ಸಮಸ್ಯೆಯಿಂದ ಕಂಗೆಟ್ಟಿದ್ದ ಜನರಿಗೆ ಪವರ ವರದಿಯ ಬೆನ್ನಲ್ಲೆ ಎಚ್ಚೆತ್ತುಕೊಂಡ ಅಧಿಕಾರಿಗಳು ನಾಳೆಯಿಂದಲೇ ಬಸ್ ಬಿಡಿಸುವ ಭರವಸೆ ನೀಡಿದ್ದಾರೆ. ಇದು ಪವರ ಟಿವಿಯ ಮತ್ತೊಂದು ಬಿಗ್ ಇಂಪ್ಯಾಕ್ಟ್ ಆಗಿದೆ.

Exit mobile version