Site icon PowerTV

ದರ್ಶನ್​ಗೆ ಜಾಮೀನು: ಆಸ್ಪತ್ರೆ ಮುಂದೆ ಪಟಾಕಿ ಸಿಡಿಸಿ ಹುಚ್ಚಾಟ ಆಡುತ್ತಿದ್ದ ಅಭಿಮಾನಿ ಪೊಲೀಸ್ ವಶಕ್ಕೆ !​

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್​ ಸೇರಿದಂತೆ ಒಟ್ಟು 7 ಜನ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್​ ಬಿಗ್​ ರಿಲೀಫ್​ ನೀಡಿದ್ದು. ಆರೋಪಿಗಳಿಗೆ ನ್ಯಾಯಾಲಯ ಇಂದು ಜಾಮೀನು ಮಂಜೂರು ಮಾಡಿದೆ. ದರ್ಶನ್​ಗೆ ಜಾಮೀನು ಸಿಕ್ಕ ಹಿನ್ನಲೆಯಲ್ಲಿ ಬಿಜಿಎಸ್​ ಆಸ್ಪತ್ರೆ ಬಳಿಯಲ್ಲಿ ಪಟಾಕಿ ಸಿಡಿಸಿ ರೋಗಿಗಳಿಗೆ ತೊಂದರೆ ನೀಡುತ್ತಿದ್ದ ಒಬ್ಬ ಅಭಿಮಾನಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ದಾಸ ದರ್ಶನ್​ಗೆ ಜಾಮೀನು ಮಂಜೂರು ಮಾಡುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದು. ವಿವಿಧ ಜಿಲ್ಲೆಗಳಲ್ಲಿನ ದರ್ಶನ್​ ಅಭಿಮಾನಿ ಸಂಘಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆಯಲ್ಲಿ ತೊಡಗಿವೆ. ದರ್ಶನ್​ ಮನೆಯ ಬಳಿಯು ತೆರಳಿರುವ ಅಭಿಮಾನಿಗಳು ಮನೆಯ ತೂಗೂದೀಪ ನಿವಾಸ ಎಂಬ ಬೋರ್ಡ್​ಗೆ ಹಾರ ಹಾಕಿ ಸಂಭ್ರಮಾಚರಣೆ ನಡೆಸಿದ್ದಾರೆ.

ಇದರ ನಡುವೆ ದರ್ಶನ್​ ದಾಖಲಾಗಿರುವ ಬಿಜಿಎಸ್​ ಆಸ್ಪತ್ರೆ ಬಳಿಯು ಅಭಿಮಾನಿಗಳು ಜಮಾಯಿಸಿದ್ದು. ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನ ಸವಾರರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇದರ ನಡುವೆ ಹುಚ್ಚು ಅಭಿಮಾನಿಯೊಬ್ಬ ಆಸ್ಪತ್ರೆ ಮುಂಭಾಗವೇ ಪಟಾಕಿ ಸಿಡಿಸಿದ್ದು. ಪೋಲಿಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Exit mobile version