Site icon PowerTV

ಒಕ್ಕಲಿಗ ಸಂಪ್ರದಾಯದಂತೆ ನಾಳೆ ಮಧ್ಯಾಹ್ನ ಅಂತ್ಯ ಸಂಸ್ಕಾರ ನೆರವೇರಲಿದೆ :ಡಿ.ಕೆ ಶಿವಕುಮಾರ್​​

ಮಂಡ್ಯ : ಮಾಜಿ ಮುಖ್ಯಮಂತ್ರಿ ಎಸ್​​.ಎಂ ಕೃಷ್ಣ ನಿಧನರಾಗಿದ್ದು. ನಾಳೆ ಮಧ್ಯಹ್ನ 3 ಗಂಟೆಗೆ ಎಸ್​ಎಂ ಕೃಷ್ಣರ ಸ್ವಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮಾಹಿತಿ ದೊರೆತಿದೆ.

ಅಂತ್ಯಕ್ರಿಯೆಯ ಬಗ್ಗೆ ಸುದ್ದಿಗೋಷ್ಟಿ ಮಾಡಿ ಮಾಹಿತಿ ನೀಡಿದ ಡಿ.ಕೆ ಶಿವಕುಮಾರ್​ ‘ ನಾಳೆ ಕರ್ನಾಟಕ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಮೂರು ದಿನಗಳ ಕಾಲ ಶೋಕಾಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ನಾಳೆ ಬೆಳಿಗ್ಗೆ ಅವರ ಅಂತಿಮ ಯಾತ್ರೆ ಆರಂಭಗೊಳ್ಳಲಿದ್ದು. ಬೆಂಗಳೂರಿನಿಂದ ಹೊರಟು ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣದ ಗಾಂಧಿ ವೃತ್ತದ ಮೂಲಕ ಸೋಮನಹಳ್ಳಿ ತಲುಪುತ್ತೇವೆ ಎಂದು ಹೇಳಿದರು.

ನಾಳೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸೋಮನಹಳ್ಳಿಯಲ್ಲಿ ಅಂತಿಮ ದರ್ಶನ ಕಲ್ಪಿಸಿ ಬಳಿಕ ಸೋಮನಹಳ್ಳಿಯ ಕೆಫೆ ಕಾಫೀ ಡೇ ಸಮೀಪ ಅಂತಿಮ ಸಂಸ್ಕಾರ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಮಂಡ್ಯ ಜನರು ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಕೊಂಡೊಯ್ಯಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಆದೆರೆ ಅದು ಸಾಧ್ಯವಿಲ್ಲ. ಅಂತಿಮ ದರ್ಶನ ಪಡೆಯುವವರು ಇಲ್ಲಿಗೆ  ಬಂದು ಅಂತಿಮ ದರ್ಶನ ಪಡೆಯಿರಿ ಎಂದು ಮನವಿ ಮಾಡಿದರು.

ಮುಂದುವರಿದು ಮಾತನಾಡಿದ ಡಿ,ಕೆ ಶಿವಕುಮಾರ್​ ‘ ನಾಳೆ ಮಧ್ಯಹ್ನ 3 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಎಸ್​.ಎಂ ಕೃಷ್ಣರ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತದೆ. ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನಡೆಯಲಿದೆ. ಶ್ರೀ ಗಂಧದ ಮೂಲಕ ಅವರ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ , ಅಂತಿಮ ವಿಧಿವಿಧಾನ ಯಾರು ನೆರವೇರಿಸಬೇಕು ಎಂದು ಅವರ ಕುಟುಂಬದವರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.

Exit mobile version