Site icon PowerTV

ಎಸ್​.ಎಂ ಕೃಷ್ಣರಂತ ಸ್ನೇಹಿತ ಮತ್ತೊಮ್ಮೆ ಸಿಗಲ್ಲ ಎಂದು ನೋವಾಗುತ್ತಿದೆ : ವಾಟಾಳ್​ ನಾಗರಾಜ್​

ಬೆಂಗಳೂರು : ಕರ್ನಾಟಕ ರಾಜ್ಯ ಕಂಡ ಧೀಮಂತ ನಾಯಕ ಎಸ್​ಎಂ ಕೃಷ್ಣರವರು ನಿಧನರಾಗಿದ್ದು. ಅವರ ಅಂತಿಮ ದರ್ಶನ ಪಡೆಯಲು ರಾಜ್ಯ ರಾಜಕಾರಣದ ನಾಯಕರು, ಚಿತ್ರರಂಗದ ನಾಯಕರು ಸೇರಿದಂತೆ ಕನ್ನಡ ಹೋರಾಟಗಾರರು ಬರುತ್ತಿದ್ದಾರೆ. ಈ ವೇಳೆ ಮಾತನಾಡಿದ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​ ಎಸ್​ಎಂ ಕೃಷ್ಣರ ಕಾರ್ಯಗಳನ್ನು ನೆನೆದರು.

ಎಸ್​​ಎಂ ಕೃಷ್ಣರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಹೊರಬಂದ ವಾಟಾಲ್​ ನಾಗರಾಜ್​ ‘ SM ಕೃಷ್ಣ ಎಂದರೆ ಅವರೊಂದು ಬ್ರಾಂಡ್​, ರಾಜ್​ಕುಮಾರ್​ರನ್ನು ವೀರಪ್ಪನ್​ ಕಿಡ್ನಾಪ್​ ಮಾಡಿದಾಗ ಎಸ್​ಎಂ ಕೃಷ್ಣ ಅವರು ಇಲ್ಲ ಎಂದಿದ್ದರೆ ರಾಜ್​ಕುಮಾರ್​ರನ್ನು ಹೊರಗಡೆ ಕರೆತರಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ವಾಟಾಳ್​ ನಾಗರಾಜ್​ ‘ಎಸ್​​ಎಂ ಕೃಷ್ಣ ಸದಾ ಆಡಳಿತ ಪಕ್ಷದಲ್ಲಿದ್ದ, ನಾನು ಸದಾ ವಿರೋಧ ಪಕ್ಷದಲ್ಲಿದ್ದೆ. ನಾವು ಎಷ್ಟೇ ಟೀಕಿಸದರು ಕೂಡ ಅವರು ಎಂದು ಮನಸ್ಸಿಗೆ ತಗೋಳಲಿಲ್ಲ.  ಆದರೆ ಇಂದು ಅವರೆ ಇಲ್ಲದಂತಾಗಿದೆ. ಅಂತ ಸ್ನೇಹಿತ ಮತ್ತೊಮ್ಮೆ ಸಿಗಲ್ಲ ಎಂಬ ನೋವು ಕಾಡುತ್ತಿದೆ ಎಂದು ಹೇಳಿದರು.

Exit mobile version