Site icon PowerTV

ಪಂಚಮಸಾಲಿ ಪ್ರತಿಭಟನೆ : ವೇದಿಕೆ ಮೇಲೆಯೆ ವಿಜಯೇಂದ್ರನಿಗೆ ಧಿಕ್ಕಾರ ಕೂಗಿದ ಹೋರಾಟಗಾರರು !

ಬೆಳಗಾವಿ : ಪಂಚಮಿಸಾಲಿಗಳಿಗೆ 2ಎ ಮೀಸಲಾತಿ ನೀಡಬೇಕು ಎಂದು ನಡೆಯುತ್ತಿರುವ ಹೋರಾಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ. ವಿಜಯೇಂದ್ರನಿಗೆ ಅವಮಾನ ಆಗಿದ್ದು. ವಿಜಯೇಂದ್ರನಿಗೆ ಪ್ರತಿಭಟನಾಕಾರರು ಧಿಕ್ಕಾರ ಕೂಗಿದ್ದಾರೆ ಎಂದು ತಿಳಿದುಬಂದಿದೆ.

ಬೆಳಗಾವಿ ಸುವರ್ಣ ವಿಧಾನಸೌಧದ ಬಳಿ‌ ಕೊಂಡಸಕೊಪ್ಪದಲ್ಲಿ ಹೋರಾಟ ನಡೆಯುತ್ತಿದ್ದು. ಈ ಹೋರಾಟದಲ್ಲಿಯು ಬಿಜೆಪಿಯ ಬಣ ಬಡಿದಾಟ ಬಹಿರಂಗವಾಗಿದೆ. ಪಂಚಮ ಸಾಲಿ ಹೋರಾಟದಲ್ಲಿ ಭಾಗವಹಿಸಿದ ವಿಜಯೇಂದ್ರನಿಗೆ ಅವಮಾನವಾಗಿದ್ದು. ವೇದಿಕೆ ಮೇಲೆ ಭಾಷಣ ಆರಂಭಿಸುತ್ತಿದ್ದಂತೆ ಪ್ರತಿಭಟನಾ ನಿರತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದಂತೆ ಯತ್ನಾಳ್​ ಬೆಂಬಲಿಗರು ವಿಜಯೇಂದ್ರ ವಿರುದ್ದ ಧಿಕ್ಕಾರ ಕೂಗಿದ್ದು. ನಿಮ್ಮ ತಂದೆ ಸಿಎಂ ಇದ್ದಾಗ ಏನು ಮಾಡಲಿಲ್ಲ. ಇಷ್ಟು ದಿನ ಪಂಚಮಸಾಲಿಗಳನ್ನು ಮರೆತು ಚುನಾವಣೆ ಸಂದರ್ಭದಲ್ಲಿ ಮಾತ್ರ ಪಂಚಮಸಾಲಿಗಳು ಬೇಕು ಎಂದು ಬರುತ್ತೀರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧಿಕ್ಕಾರ ಕೂಗಿದ ತಕ್ಷಣ ಬಿ.ವೈ.ರಾಘವೇದ್ರ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ಸುಮ್ಮನಾದರು. ಜಯ ಮೃತ್ಯುಂಜಯ ಸ್ವಾಮೀಜಿ ಸುಮ್ಮನಿರಿ ಎಂದು ಹೇಳಿದರು ಕೂಡ ಸುಮ್ಮನಾಗದ ಪ್ರತಿಭಟನಕಾರರು ಗರಂ ಆದರು. ಇದರ ನಡುವೆ ಶಾಸಕ ಸಿದ್ದು ಸವದಿ ಧಿಕ್ಕಾರ ಕೂಗಿದ ಹೋರಾಟಗಾರನ ಮೇಲೆ ಗರಂ ಆಗಿ ಕೈ ಮಾಡಲು ಮುಂದಾದರು ಎಂದು ತಿಳಿದು ಬಂದಿದೆ.

Exit mobile version