Site icon PowerTV

ತಾಯಿ-ಮಗನ ಧಾರುಣ ಸಾ*ವು : ಬಾವಿಯೇ ಮೃತ್ಯು ಕೂಪ !

ರಾಯಚೂರು : ಆಟವಾಡುತ್ತಿದ್ದ ಮಗ ಕಾಲು ಜಾರಿ ಬಾವಿಗೆ ಬಿದ್ದಿದ್ದು. ಮಗನನ್ನು ರಕ್ಷಿಸಲು ಹೋದ ತಾಯಿಯು ಬಾವಿಗೆ ಬಿದ್ದು ಸಾವನ್ನಪ್ಪಿದ ಧಾರುಣ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು ತಾಲ್ಲೂಕಿನ ಮಲಿಯಾಬಾದ್ ಗ್ರಾಮದಲ್ಲಿ ಘಟನೆ ನಡೆದಿದ್ದು. ಮಗ ಸಂಜು ಆಟವಾಡುತ್ತಿದ್ದ ವೇಳೆ ಕಾಲು ಜಾರಿ ಬಾವಿಗೆ ಬಿದ್ದಿದ್ದನು. ಈ ವೇಳೆ ಅಲ್ಲಿಯೆ ಇದ್ದ ತಾಯಿ ರಾಧಮ್ಮ ಮಗನನ್ನು ರಕ್ಷಿಸಲು ಮುಂದಾಗಿದ್ದು. ಅವರು ಕೂಡ ಕಾಲು ಜಾರಿ ಬಾವಿಗೆ ಬಿದ್ದಿದ್ದಾರೆ.

ಈ ಸಮಯದಲ್ಲಿ ಅಲ್ಲಿ ಯಾರು ಇಲ್ಲದ ಪರಿಣಾಮವಾಗಿ ತಾಯಿ ಮಗ ಇಬ್ಬರು ಮೃತ ಪಟ್ಟಿದ್ದು. ನಂತರ ಸ್ಥಳೀಯರು ಇಬ್ಬರ ಮೃತದೇಹವನ್ನು ಬಾವಿಯಿಂದ ಹೊರತೆಗೆದ್ದಿದ್ದಾರೆ ಎಂದು ತಿಳಿದು ಬಂದಿದೆ. ಯರಗೇರಾ ಪೋಲಿಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ಮಾಹಿತಿ ದೊರೆತಿದೆ.

 

Exit mobile version