Site icon PowerTV

ಸಿರಿಯಾ ಅಂತರ್ಯುದ್ಧದ ಲಾಭ ಬಳಸಿ 10 KM ಭೂಮಿ ವಶಪಡಿಸಿಕೊಂಡ ಇಸ್ರೇಲ್!

ಡಮಾಸ್ಕಸ್ : ಸಿರಿಯಾದಲ್ಲಿ ನಡೆತಯುತ್ತಿರುವ ಬಂಡುಕೋರರ ದಾಳಿಗೆ ಹೆದರಿ ಸಿರಿಯಾ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ದೇಶದಿಂದಲೇ ಪರಾರಿಯಾದ ಬೆನ್ನಲ್ಲೇ ಇಸ್ರೇಲ್ ಸಿರಿಯಾ ನೆಲಕ್ಕೆ ಕಾಲಿಟ್ಟಿದ್ದು, ಯುಎಸ್​ಎಸ್​​ಏರ್ ಫೋರ್ಸ್ ಬಾಂಬರ್‌ಗಳು ಇಸ್ರೇಲ್‌ನೊಂದಿಗೆ ಸಿರಿಯಾದ ಮಿಲಿಟರಿ ನೆಲೆಗಳು ಮತ್ತು ರಾಸಾಯನಿಕ ಶಸ್ತ್ರಾಸ್ತ್ರಗಳ ಕಾರ್ಖಾನೆಗಳ ಮೇಲೆ ಪ್ರಬಲವಾದ ವಾಯುದಾಳಿಗಳನ್ನು ನಡೆಸಿ ಅವುಗಳನ್ನು ನಾಶಪಡಿಸಿದ್ದಾರೆ.

ಸಿರಿಯಾ ದೇಶದಲ್ಲಿ 13 ವರ್ಷಗಳ ಕಾಲ ನಡೆದ ಭೀಕರ ಅಂತರ್ಯುದ್ಧದಲ್ಲಿ ಅದೆಷ್ಟೋ ಜೀವಗಳು ಬಲಿಯಾಗಿವೆ. ಭಾರೀ ಪ್ರಮಾಣದಲ್ಲಿ ಆಸ್ತಿಪಾಸ್ತಿಗಳು ನಾಶವಾಗಿದೆ. ಈಗ ಸಿರಿಯಾದ ಬಂಡಾಯ ಗುಂಪು ರಾಜಧಾನಿ ಡಮಾಸ್ಕಸ್ ಅನ್ನು ವಶಪಡಿಸಿಕೊಳ್ಳುವ ಮೂಲಕ ಇಡೀ ದೇಶವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಸಿರಿಯಾ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಪಲಾಯನ ಮಾಡಿದ್ದಾರೆ ಎಂದು ಹೇಳಲಾಗಿದೆ.

ಬಶರ್ ಅಲ್-ಅಸ್ಸಾದ್ ಪರಾರಿಯಾದ ನಂತರ ಸಿರಿಯಾವನ್ನು ಈಗ ಇಸ್ಲಾಮಿಕ್ ಬಂಡುಕೋರ ಗುಂಪು ಹಯಾತ್ ತಹ್ರೀರ್ ಅಲ್-ಶಾಮ್ ತನ್ನ ವಶಕ್ಕೆ ತೆಗೆದುಕೊಂಡಿದೆ. ಸದ್ಯ ಸಿರಿಯಾ ಅಧ್ಯಕ್ಷರಾಗಿದ್ದ ಬಶರ್ ಅಲ್-ಅಸ್ಸಾದ್ ತನ್ನ ಕುಟುಂಬದೊಂದಿಗೆ ರಷ್ಯಾಕ್ಕೆ ಪಲಾಯನ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಈತನ್ಮಧ್ಯೆ ಸಿರಿಯಾ ಮತ್ತು ಅಲ್ಲಿನ ಬಂಡುಕೋರರ ನಡುವಿನ ಕಾದಾಟದ ಲಾಭವನ್ನು ಇಸ್ರೇಲ್ ಪಡೆದುಕೊಂಡಿದೆ.

Exit mobile version