Site icon PowerTV

ಕೆರೆಗೆ ಬಿದ್ದ ಯುವತಿ : ಜೀವದ ಹಂಗು ತೊರೆದು ರಕ್ಷಿಸಿದ ಗೃಹರಕ್ಷಕ ಸಿಬ್ಬಂದಿ !

ಚಾಮರಾಜನಗರ: ಸೇತುವೆಯಿಂದ ಕೆರೆಗೆ ಬಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಜೀವದ ಹಂಗು ತೊರೆದು ರಕ್ಷಿಸಿರುವ ಪ್ರಸಂಗ ಚಾಮರಾಜನಗರದ ಕೊಳ್ಳೇಗಾಲದಲ್ಲಿ ನಡೆದಿದೆ.

ಹನೂರು ತಾಲೂಕಿನ ಕಣ್ಣೂರಿನ ರಾಜಮ್ಮ (17) ಕೆರೆಗೆ ಬಿದ್ದಿದ್ದ ವಿದ್ಯಾರ್ಥಿನಿ. ಕೊಳ್ಳೇಗಾಲದ ಚಿಕ್ಕರಂಗನಾಥಕೆರೆ ಯುವತಿ ಕೆರೆಗೆ ಬಿದ್ದಿದ್ದಳು. ಹತ್ತಿರದಲ್ಲೇ ಇದ್ದ ಗೃಹರಕ್ಷಕ ಕೃಷ್ಣಮೂರ್ತಿ ಕೆರೆಗೆ ಧುಮುಕಿ ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಿದ್ದಾರೆ.

ಜೆಎಸ್‌ಎಸ್ ಕಾಲೇಜಿನ ಪ್ರಥಮ ಪಿ.ಯು ವಿದ್ಯಾರ್ಥಿನಿ ಕೆರೆಗೆ ಬಿದ್ದಾಗ ಸ್ಥಳೀಯರ ಸಹಕಾರದಿಂದ ಕೃಷ್ಣಮೂರ್ತಿ ಮೇಲಕ್ಕೆತ್ತಿದ್ದಾರೆ. ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯನ್ನು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

Exit mobile version