Site icon PowerTV

ಬೈಕ್ ಓಡಿಸುವಾಗಲೆ ಹೃದಯಾಘಾತ : ಸಾ*ವನ್ನಪ್ಪಿದ ಬೈಕ್​ ಸವಾರ!

ಮೈಸೂರು: ಬೈಕ್​ ಓಡಿಸುತ್ತಿದ್ದಾಗ ಹೃದಯಾಘಾತವಾಗಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು. 40 ವರ್ಷದ ರವಿ ಎಂಬಾತ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಇತ್ತೀಚೆಗೆ ಹೃದಯಾಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ನಿಂತವರು ನಿಂತಲ್ಲೆ, ಕುಂತವರು ಕುಂತಲ್ಲೆ ಕುಸಿದು ಬಿದ್ದು ಸಾಯುತ್ತಿದ್ದಾರೆ. ಕೇವಲ ವಯಸ್ಸಾದವರು ಮಾತ್ರವಲ್ಲದೆ. ಮಧ್ಯಮ ವಯಸ್ಕರು ಚಿಕ್ಕಮಕ್ಕಳು ಸೇರಿದಂತೆ ಎಲ್ಲಾ ವರ್ಗದ ಜನರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಅದೇ ರೀತಿಯಾಗಿ ಮೈಸೂರಿನಲ್ಲಿ ಘಟನೆಯೊಂದು ನಡೆದಿದ್ದು.ಬೈಕ್​ ಸವಾರ ಬೈಕ್​ನಲ್ಲಿ ಚಲಿಸುತ್ತಿದ್ದಾಗಲೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಮೈಸೂರಿನ ಬೋಗಾದಿ ರಿಂಗ್ ರಸ್ತೆಯಲ್ಲಿ ಘಟನೆ ನಡೆದಿದ್ದು. ರಸ್ತೆಯಲ್ಲಿ ಬೈಕ್​ ಚಲಾಯಿಸುತ್ತಿದ್ದ ರವಿ ಎಂಬಾತ ಹೃದಯಾಘಾತದಿಂದ ಪ್ರಜ್ಞೆ ತಪ್ಪಿದ್ದಾನೆ. ಇದರಿಂದ ಬೈಕ್​ ಮೇಲಿನ ನಿಯಂತ್ರಣ ಕಳೆದುಕೊಂಡ ಸವಾರ ತಡೆಗೋಡೆಗೆ ಗುದ್ದಿದ್ದು ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.

ಅಪಘಾತದ ದೃಷ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು. ಮೃತನನ್ನು ಚಾಮರಾಜನಗರದ ನಂಜೆದೇವನಪುರ ಗ್ರಾಮದ ರವಿ ಎಂದು ಗುರುತಿಸಲಾಗಿದೆ. ಘಟನಾ ಸಂಬಂಧ ಮೈಸೂರಿನ ಕುವೆಂಪು ನಗರ ಪೋಲಿಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ದೊರೆತಿದೆ.

 

Exit mobile version