Site icon PowerTV

‘ಬಾಡು ನಮ್​ ಗಾಡು’ : 87 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟಕ್ಕೆ ಬೇಡಿಕೆ !

ಮಂಡ್ಯ : ಇದೇ ತಿಂಗಳು 20 ನೇ ತಾರೀಖಿನಿಂದ ಮಂಡ್ಯದಲ್ಲಿ 87 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು. ಈ ಕಾರ್ಯಕ್ರಮದಲ್ಲಿ ಬಾಡೂಟ ಬೇಕೆಂದು ಪ್ರಗತಿ ಪರರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

87 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಹಾಕಿಸಬೇಕೆಂದು ಪ್ರಗತಿಪರರ ತಂಡ ಆಗ್ರಹಿಸುತ್ತಿದ್ದು. ‘ಬಾಡು ನಮ್​ ಗಾಡು’ ಎಂಬ ಘೋಷ ವಾಕ್ಯದೊಂದಿಗೆ ಅಭಿಯಾನ ಆರಂಭವಾಗಿದೆ ಎಂದು ಮಾಹಿತಿ ದೊರೆತಿದೆ.

ಸಕ್ಕರೆ ನಾಡು ಮಂಡ್ಯ ಎಂದಾಕ್ಷಣ ನೆನಪಿಗೆ ಬರೋದು ಅಲ್ಲಿನ ಜನರ ಆಹಾರ ಪದ್ದತಿ. ಸಾಮಾನ್ಯವಾಗಿ ಮುದ್ದೆ, ನಾಟಿ ಕೋಳಿ ಸಾರು ಇಲ್ಲಿನ ಜನರಿಗೆ ಹೆಚ್ಚು ಪ್ರಿಯವಾದ ಆಹಾರ ಎಂದು ಹೇಳಬಹುದು. ಈಗ ಇದೇ ಕಾರಣಕ್ಕೆ ಮಂಡ್ಯದಲ್ಲಿ ನಾನ್​ವೆಜ್​ ಪ್ರಿಯರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಹಾಕಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಗತಿಪರರು ಕೂಡ ಬಾಡೂಟ ಹಾಕಿಸಲೇಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು. ಬಹುಸಂಖ್ಯಾತರ ಆಹಾರ ಪದ್ದತಿಯನ್ನು ಅವಮಾನಿಸದಿರಿ ಎಂದು ಬೇಡಿಕೆ ಇಟ್ಟಿದ್ದಾರೆ. ಈಗಾಗಲೆ ಸಚಿವ ಚೆಲುವರಾಯಸ್ವಾಮಿ ಮತ್ತು ಕನ್ನಡ ಸಾಹಿತ್ಯ ಪರಿಷತ್​ ರಾಜ್ಯಾಧ್ಯಕ್ಷ ಮಹೇಶ್​ ಜೋಶಿಯವರಿಗೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಈ ಬೇಡಿಕೆ ತಲೆನೋವಾಗಿ ಪರಿಣಮಿಸಿದೆ ಎಂದು ಹೇಳಬಹುದು.

 

Exit mobile version