Site icon PowerTV

ಸರ್ಕಾರಿ ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಬಿಸಿಯೂಟ ವಿತರಣೆ !

ಬಾಗಲಕೋಟೆ : ಸರ್ಕಾರಿ ಶಾಲೆ ಮಕ್ಕಳಿಗೆ ಕಳೆಪೆ ಗುಣಮಟ್ಟದ ಬಿಸಿಯೂಟವನ್ನು ವಿತರಣೆ ಮಾಡಲಾಗುತ್ತಿದ್ದು. ಬಿಸಿಯೂಟದಲ್ಲಿ ಅನ್ನಕ್ಕಿಂತ ಹೆಚ್ಚಿಗೆ ಹುಳುಗಳೆ ಪತ್ತೆಯಾಗಿದೆ. ಪ್ರತಿ ದಿನ ಬಿಸಿಯೂಟದಲ್ಲಿ ನುಶಿ ಮತ್ತು ಬಾಲಹುಳು ಪತ್ತೆಯಾಗುತ್ತಿದೆ ಎಂದು ತಿಳಿದುಬಂದಿದೆ.

ಬಾಗಲಕೋಟೆ ಜಿಲ್ಲೆ ತೇರದಾಳ ಪಟ್ಟಣದಲ್ಲಿನ ದೇವರಾಜ ಆಂಗ್ಲ ಮಾಧ್ಯಮ ಸರ್ಕಾರಿ ಪ್ರೌಡಶಾಲೆಯಲ್ಲಿ ಘಟನೆ ನಡೆದಿದೆ. ಇದರ ಕುರಿತು ವಿಧ್ಯಾರ್ಥಿಗಳು ಹೆಡ್​ ಮಾಸ್ಟರ್​ ಗಮನಕ್ಕೆ ತಂದಿದ್ದರು ಕೂಡ ಶಾಲೆಯ ಹೆಡ್​ ಮಾಸ್ಟರ್​ ದಿವ್ಯ ನಿರ್ಲಕ್ಷದಿಂದಾಗಿ ಸಮಸ್ಯೆ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.

ಹೈಸ್ಕೂಲ್​ನಲ್ಲಿ ಸುಮಾರು 150ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಕಲಿಯುತ್ತಿದ್ದು. ಪ್ರತಿದಿನ ಬಿಸಿಯೂಟದಲ್ಲಿ  ಬಾಲಹುಳು ಮತ್ತು ನುಶಿ ಪತ್ತೆಯಾಗುತ್ತಿದೆ ಎಂದು ಆರೋಪಿಸಲಾಗಿದೆ.

 

Exit mobile version