Site icon PowerTV

ಹಾಡ ಹಗಲೆ ಸರಗಳ್ಳತನ ಮಾಡಲು ಯತ್ನ : ಹಿಡಿದು ಥಳಿಸಿದ ಸಾರ್ವಜನಿಕರು !

ಬೆಂಗಳೂರು : ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ ಹೆಚ್ಚಾಗಿದ್ದು. ಬೆಂಗಳೂರಿನ ಜೆಪಿ ನಗರದಲ್ಲಿ ಯುವತಿಯೊಬ್ಬಳನ್ನು ಹಿಂಬಾಲಿಸಿಕೊಂಡು ಬಂದ ವ್ಯಕ್ತಿ ಯುವತಿಯ ಕತ್ತಿನಲ್ಲಿದ್ದ ಸುಮಾರು 10 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಆದರೆ ಅಲ್ಲಿ ಇದ್ದ ಸ್ಥಳಿಯರ ಸಮಯ ಪ್ರಜ್ಞೆಯಿಂದ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಾಹಿತಿ ದೊರೆತಿದೆ.

ಬೆಂಗಳೂರಿನ ಜೆ.ಪಿ ನಗರದ ಡೆಲ್ಮಿಯ ಸರ್ಕಲ್ ಬಳಿ ಘಟನೆ ನಡೆದಿದ್ದು. ಮೂರು ವರ್ಷಗಳಿಂದ ಯುವತಿ  ಡೆಲ್ಮಿಯ ಸರ್ಕಲ್ ಬಳಿಯಲ್ಲಿನ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಆದರೆ ಎಂದಿನಂತೆ ನೆನ್ನೆ ಸಂಜೆ ಯುವತಿ ವಿಇಟಿ ಕಾಲೇಜು ಕಡೆಯಿಂದ ನಡೆದುಕೊಂಡು ಬರುತ್ತಿದ್ದಳು. ಈ ವೇಳೆ ಯುವತಿಯನ್ನು ಹಿಂದುಗಡೆಯಿಂದ ಹಿಂಬಾಲಿಸಿಕೊಂಡ ಬಂದ ಅಬ್ದುಲ್​ ಎಂಬಾತ ಯುವತಿಯು ಕುತ್ತಿಗೆಯಲ್ಲಿದ್ದ ಸರವನ್ನು ಕಿತ್ತುಕೊಂಡು ಓಡಿ ಹೋಗಿದ್ದಾನೆ.

ಈ ವೇಳೆ ಅಲ್ಲಿಯೆ ಇದ್ದ ಸ್ಥಳೀಯರು ಎಚ್ಚೆತ್ತುಕೊಂಡು ಆತನನ್ನು ಹಿಂಬಾಲಿಸಿಕೊಂಡು ಹೋಗಿ ಹಿಡಿದಿದ್ದು. ಆತನಿಂದ ಸರವನ್ನು ವಾಪಾಸು ಪಡೆದಿದ್ದಾರೆ ಎಂದು ಮಾಹಿತಿ ದೊರೆತಿದೆ.

Exit mobile version