Site icon PowerTV

ಮೂರು ದಿನಗಳಿಂದ ಕಾಣೆಯಾಗಿದ್ದ ವಕೀಲ ಶವವಾಗಿ ಪತ್ತೇ !

ಚಿಕ್ಕೋಡಿ‌ : ಮೂರು ದಿನಗಳಿಂದ ಕಾಣೆಯಾಗಿದ್ದ ಬೆಳಗಾವಿ ಜಿಲ್ಲೆಯ ಹಲ್ಯಾಳ ಗ್ರಾಮದ ವಕೀಲ ಕೃಷ್ಣಾನದಿಯಲ್ಲಿ ಶವವಾಗಿ ಪತ್ತೆಯಾಗಿದ್ದು. ಸ್ಥಳಕ್ಕೆ ಅಥಣಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ದೊರೆತಿದೆ.

ಡಿಸೆಂಬರ್​ 3ನೇ ತಾರೀಖಿನಂದು ಬೆಳಗಾವಿ ಜಿಲ್ಲೆಯ, ಅಥಣಿ ತಾಲ್ಲೂಕಿನಿಂದ ನ್ಯಾಯವಾದಿ ಸುಭಾಷ್​ ಮಾರುತಿ ಪಾಟನಕರ (58) ನಾಪತ್ತೆಯಾಗಿದ್ದರು. ಇವರ ಪತ್ತೆಗೆ ಆಗ್ರಹಿಸಿ ನೆನ್ನೆ ಅಥಣಿಯಲ್ಲಿ ನ್ಯಾಯವಾದಿಗಳು ಪ್ರತಿಭಟನೆಯನ್ನು ನಡೆಸಿದ್ದರು. ಆದರೆ ಇಂದು ಮುಂಜಾನೆ ಕೃಷ್ಣ ನದಿಯಲ್ಲಿ ವಕೀಲನ ಶವ ಪತ್ತೆಯಾಗಿದೆ ಎಂದು ಮಾಹಿತಿ ದೊರೆತಿದೆ.

ಮೇಲ್ನೋಟಕ್ಕೆ ಆತ್ಮಹತ್ಯೆಯ ರೀತಿ ಕಾಣುತ್ತಿದೆ ಎಂದು ಮಾಹಿತಿ ದೊರೆತಿದ್ದು. ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ ಎಂದು ತಿಳಿದು ಬಂದಿದೆ. ಕೃತ್ಯ ಸಂಬಂಧ ಅಥಣಿ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದದಾರೆ ಎಂದು ತಿಳಿದುಬಂದಿದೆ.

 

 

Exit mobile version