Site icon PowerTV

ಗೀತಾ ಪಿಕ್ಚರ್ಸ್​ನಿಂದ ಹೊಸ ಸಿನಿಮಾ ಘೋಷಣೆ !

ಬೆಂಗಳೂರು: ಗೀತಾ ಶಿವರಾಜ್​ ಕುಮಾರ್​ ನಿರ್ಮಾಣ ಸಂಸ್ಥೆ ಹೊಸ ಸಿನಿಮಾ ಘೋಷಣೆ ಮಾಡಿದ್ದು. ರಾಜ್​ ಮನೆಯ ಕುಡಿ ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಲಿದ್ದಾರೆ ಎಂದು ಮಾಹಿತಿ ದೊರೆತಿದೆ.

‘ವೇದ’, ‘ಭೈರತಿ ರಣಗಲ್’ ಸಿನಿಮಾ  ಸಕ್ಸಸ್ ಬಳಿಕ ಮತ್ತೊಂದು ಹೊಸ ಚಿತ್ರ ನಿರ್ಮಾಣ ಮಾಡಲು ಗೀತಾ ಶಿವರಾಜ್‌ಕುಮಾರ್   ಮುಂದಾಗಿದ್ದಾರೆ. ಈ ಬಾರಿ ದೊಡ್ಮನೆ ಕುಡಿ ಧೀರೆನ್ ಆರ್. ರಾಜ್‌ಕುಮಾರ್  ಹೊಸ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾಗೆ ‘ಶಾಖಾಹಾರಿ’ ಸಂದೀಪ್ ಸುಂಕದ್ ನಿರ್ದೇಶನ ಮಾಡುತ್ತಿದ್ದಾರೆ.

ಶಾಖಾಹಾರಿ’ ಎಂಬ ವಿಭಿನ್ನ ಸಿನಿಮಾ ಕೊಟ್ಟಂತಹ ಸಂದೀಪ್ ಜೊತೆ ಗೀತಾ ಶಿವರಾಜ್‌ಕುಮಾರ್ ಕೈಜೋಡಿಸಿದ್ದಾರೆ. ‘ಶಿವ 143’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಧೀರೆನ್ ಹೊಸ ಬಗೆಯ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

Exit mobile version