Site icon PowerTV

ಹೆತ್ತವರನ್ನೆ ಕೊ*ಲೆ ಮಾಡಿ, ವಾಕಿಂಗ್​ಗೆ ಹೋಗಿದ್ದೆ ಎಂದು ನಾಟಕವಾಡಿದ ಕಿರಾತಕ !

ದೆಹಲಿ : ದಕ್ಷಿಣ ದೆಹಲಿಯನ್ನೇ ಬೆಚ್ಚಿ ಬೀಳಿಸಿದ್ದ ತ್ರಿವಳಿ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಇದೀಗ ಹತ್ಯೆ ಆರೋಪಿಯ ವಿಚಾರ ತಿಳಿಯುತ್ತಿದ್ದಂತೆ ನೆರೆಹೊರೆಯವರೇ ಆಘಾತಕ್ಕೆ ಒಳಗಾಗಿದ್ದಾರೆ.

ಬುಧವಾರ ಬೆಳ್ಳಂಬೆಳಗ್ಗೆ ದಕ್ಷಿಣ ದೆಹಲಿಯ ನೆಬ್​ಸರೈ ಪ್ರದೇಶದಲ್ಲಿ ತ್ರಿವಳಿ ಕೊಲೆ ನಡೆದಿದ್ದು, ದಂಪತಿ ಹಾಗೂ ಮಗಳನ್ನು ಚಾಕುವಿನಿಂದ ಇರಿದು ಹತ್ಯೆ ನಡೆಸಲಾಗಿತ್ತು ಎನ್ನಲಾಗಿದೆ, ಇನ್ನು ಹತ್ಯೆ ನಡೆದ ಸಮಯದಲ್ಲಿ ದಂಪತಿಯ ಪುತ್ರ ವಾಕಿಂಗ್ ಹೋಗಿದ್ದು ಬರುವಷ್ಟರಲ್ಲಿ ಈ ದುರ್ಘಟನೆ ನಡೆದಿತ್ತು ಎಂದು ಹೇಳಲಾಗಿದೆ. ಅಲ್ಲದೆ ಪುತ್ರ ಮನೆಗೆ ಬಂದು ನೋಡಿದಾಗ ಮನೆಯ ಕೊನೆಯಲ್ಲಿ ಮೂವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು ಆಘಾತಗೊಂಡ ಮಗ ನೆರೆಹೊರೆಯವರಿಗೆ ತಾನು ವಾಕಿಂಗ್ ಹೋಗಿ ಬರುವಷ್ಟರಲ್ಲಿ ಯಾರೋ ದುಷ್ಕರ್ಮಿಗಳು ನನ್ನ ಮನೆಯವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಹೇಳಿದ್ದಾನೆ.

ಇತ್ತ ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ ವೇಳೆ ಮನೆಯಲ್ಲಿ ಯಾವುದೇ ವಸ್ತುಗಳು ಕಳ್ಳತನಾಗಿರಲಿಲ್ಲ ಹಾಗಾಗಿ ಕಳ್ಳತನ ನಡೆಸಲು ಕೃತ್ಯ ಎಸಗಿಲ್ಲ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿದೆ. ಇನ್ನು ವಾಕಿಂಗ್ ಹೋಗಿರುವ ಮಗನನ್ನು ವಿಚಾರಣೆ ನಡೆಸಿದ ವೇಳೆ ಆತ ಪೊಲೀಸರಲ್ಲಿ ಬೇರೆ ಬೇರೆ ಕಾರಣಗಳನ್ನು ನೀಡಿದ್ದಾನೆ ಆದರೆ ಪೊಲೀಸರಿಗೆ ಮಗನ ಮೇಲೆ ಅನುಮಾನಗೊಂಡು ಹೆಚ್ಚಿನ ವಿಚಾರಣೆ ನಡೆಸಿದ ವೇಳೆ ಕೊಲೆಯನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

Exit mobile version